×
Ad

ಹುಮನಾಬಾದ್ : ಹಝ್ರತ್ ಸೈಯದ್ ಇಸ್ಮಾಯಿಲ್ ಷಾ ಖಾದ್ರಿ 556ನೇ ಉರೂಸ್

Update: 2026-06-18 14:18 IST

ಹುಮನಾಬಾದ್ : ತಾಲೂಕಿನ ಘೋಡವಾಡಿ ಗ್ರಾಮದ ಸುಪ್ರಸಿದ್ದ ಐತಿಹಾಸಿಕ ಸೂಫಿ ಸಂತರಾಗಿರುವ ಹಝ್ರತ್ ಸೈಯದ್ ಇಸ್ಮಾಯಿಲ್ ಷಾ ಖಾದ್ರಿ‌ ಅವರ ಐತಿಹಾಸಿಕ ಉರೂಸ್ ಸಂಭ್ರಮದಿಂದ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ ರಾಜ್ಯದ ಹಾಗೂ ನೆರೆ ರಾಜ್ಯಗಳಿಂದಲೂ ಜನರು ಆಗಮಿಸಿದ್ದರು.  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು, ನಾನು ಈ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕ ಹಾಗೂ ಸಚಿವನಾಗಿದ್ದೇನೆ.  ಇಲ್ಲಿನ ಕೆರೆ ನಿರ್ಮಾಣಕ್ಕೆ  ನಾನೇ ಸ್ವಇಚ್ಛೆಯಿಂದ ಕೆರೆ ನಿರ್ಮಾಣಕ್ಕೆ ಅನುದಾನ ತಂದಿದ್ದೇನೆ. ಇಲ್ಲಿ ನೀರಿನ ಸಮಸ್ಯೆ ಇದೆ ಎಂದು ತಿಳಿಯಿತು. ಇಲ್ಲಿ ಒಂದು ಬೋರ್‌ವೇಲ್ ಕೊರೆಸುವ ಕಾರ್ಯ ವಿಧಾನ ಪರಿಷತ್ ಸದಸ್ಯರಾದ ನನ್ನ ಸಹೋದರ ಭೀಮರಾವ್ ಪಾಟೀಲ್ ಅವರ ಅನುದಾನದಲ್ಲಿ ಮಾಡಿಸುತ್ತೇವೆ ಎಂದು ಭರವಸೆ ನೀಡಿದರು.

ಈ ವೇಳೆ ಹೈದರಾಬಾದ್ ನ ಖ್ಯಾತ ಮುಸ್ಲಿಂ ಧರ್ಮಗುರು ಹಝ್ರತ್ ಡಾ. ರಿಜ್ವಾನ್ ಖಾದ್ರಿ ಅವರು ಆಶೀರ್ವಚನ ನೀಡಿದರು.

ಈ ಸಂಧರ್ಭದಲ್ಲಿ ಹಝ್ರತ್ ಇಸ್ಮಾಯಿಲ್ ಷಾ ಖಾದ್ರಿ ಮುತವಲ್ಲಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಗುಲಾಮ್ ದಸ್ತಾಗೀರ್, ಉಪಾಧ್ಯಕ್ಷ ಖಾದರ್ ರಂಜಾನಿ, ಆದಿಲ್ ಉಸ್ಮಾನ್ ಮಗರಬಿ, ಶಾಬೋದ್ದಿನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರ್ ಮಿಯಾ ಹಾಗೂ ದಲಿತ ಮುಖಂಡ ಸುರೇಶ್ ಘಾಂಗ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News