ಬೀದರ್| ವೀರಶೆಟ್ಟಿ ಎರಂಡಗೆ ಅವರಿಗೆ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ
ಬಸವಕಲ್ಯಾಣ : ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಬಸವಕಲ್ಯಾಣ ತಾಲೂಕು ಆಡಳಿತ ವತಿಯಿಂದ ವಾರ್ತಾ ಭಾರತಿ ತಾಲೂಕು ವರದಿಗಾರ ವೀರಶೆಟ್ಟಿ ಎರಂಡಗೆ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಿಕೋದ್ಯಮದ ಮೂಲಕ ಸ್ಥಳೀಯ ಸಮಸ್ಯೆಗಳು, ಜನಸಾಮಾನ್ಯರ ಧ್ವನಿ ಹಾಗು ಸಾರ್ವಜನಿಕರ ಹಿತಾಸಕ್ತಿಗಳ ವಿಷಯಗಳನ್ನು ವರದಿಗಳ ಮೂಲಕ ಬೆಳಕಿಗೆ ತರುತ್ತಿರುವುದನ್ನು ಪರಿಗಣಿಸಿ ರವಿವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ದಿನದಂದು ವೀರಶೆಟ್ಟಿ ಎರಂಡಗೆ ಅವರಿಗೆ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.
ಈ ಸಂಧರ್ಭದಲ್ಲಿ ಸಹಾಯಕ ಆಯುಕ್ತ ಪ್ರಕಾಶ್ ಕುದುರೆ, ತಹಶೀಲ್ದಾರ್ ದತ್ತಾತ್ರೇಯ ಜೇ ಗಾದ, ಇಓ ರಮೇಶ್ ಸುಲ್ಫಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದಿಲೀಪ್ ಉತ್ತಮ್, ಸಿಎಂಸಿ ಪೌರಾಯುಕ್ತ ರಾಜು ಬಣಕಾರ್ ಹಾಗೂ ಸಿಪಿಐ ಆಲಿಸಾಬ್ ಸೇರಿದಂತೆ ಹಲವರಿದ್ದರು.