ಬೀದರ್ : ದಲಿತ ಮತ್ತು ಆದಿವಾಸಿಗಳ ನಂತರ ಅತ್ಯಂತ ಹೆಚ್ಚು ಮಕ್ಕಳು ಶಾಲೆಯಿಂದ ದೂರ ಉಳಿದದ್ದು ಮುಸ್ಲಿಮರಾಗಿದ್ದಾರೆ. ದಲಿತ ಆದಿವಾಸಿಗಳ ನಂತರ ಅತ್ಯಂತ ಕಡಿಮೆ ಭೂಮಿ ಹೊಂದಿದವರು ಮುಸ್ಲಿಮರಾಗಿದ್ದಾರೆ. ಸರಕಾರಿ ನೌಕರಿಗಳಲ್ಲೂ ಮುಸ್ಲಿಂ ಸಮುದಾಯದ ಜನಸಂಖ್ಯೆ ಕಡಿಮೆಯಾಗಿರುತ್ತದೆ. ಯಾವ ಸಮಾಜದಲ್ಲಿ ರಾಜಕೀಯ ನಾಯಕರಿದ್ದಾರೊ ಆ ಸಮಾಜಕ್ಕೆ ಮಾತ್ರ ಗೌರವ ನೀಡಲಾಗುತ್ತದೆ. ರಾಜಕೀಯ ನಾಯಕರಿಲ್ಲದ ಸಮುದಾಯಕ್ಕೆ ಗೌರವ ನೀಡುವುದಿಲ್ಲ, ಬದಲಾಗಿ ಮತದಾನಕ್ಕಾಗಿ ಉಪಯೋಗಿಸಲಾಗುತ್ತದೆ. ಹಾಗಾಗಿ ನಾವು ನಮ್ಮ ಸಮುದಾಯದ ರಾಜಕೀಯ ನಾಯಕರನ್ನು ರೂಪಿಸಬೇಕಾಗಿದೆ ಎಂದು ಹೈದ್ರಾಬಾದ್ ನ ಸಂಸದ ಹಾಗೂ ಎಐಎಂಐಎಂ ನ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಹೇಳಿದರು.

ಬೀದರ್ ಜಿಲ್ಲೆಯ ಬಗದಲ್ ಗ್ರಾಮದಲ್ಲಿ ಶನಿವಾರ ಸಾಯಂಕಾಲ ನಡೆದ ಎಐಎಂಐಎಂ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಗಟ್ಟಿಯಾದ ಮುಸ್ಲಿಂ ಸಮುದಾಯದ ನಾಯಕರನ್ನು ಬೆಳೆಸಿದರೆ ಭಾರತ ದೇಶ ಇನ್ನಷ್ಟು ಗಟ್ಟಿಯಾಗಲಿದೆ. ಭಾರತ ದೇಶದಲ್ಲಿ ದಂಗೆಗಳಾಗುವುದಿಲ್ಲ. ನಮ್ಮ ಮತದಾನ ಪಡೆದು ಅವರು ಅಧಿಕಾರ ಹಿಡಿಯುತ್ತಿದ್ದಾರೆ. ಆದ್ದರಿಂದ ನಾವೆಲ್ಲರೂ ಯೋಚನೆ ಮಾಡಬೇಕಾಗಿದೆ ಎಂದರು.

ಭಾರತದಲ್ಲಿ ಮುಸ್ಲಿಮರು ಅತ್ಯಂತ ಕಡುಬಡತನದಲ್ಲಿ ಬದುಕುತ್ತಿದ್ದಾರೆ. ಕಾರಣ ಅವರು ಬರೀ ಮತದಾನ ನೀಡುವುದರಲ್ಲಿದ್ದಾರೆ. ಮತದಾನ ಪಡೆದವರು ನಮ್ಮನ್ನು ಆಳುತ್ತಿದ್ದಾರೆ. ಭಾರತದ ಮುಸ್ಲಿಮರಿಗೆ ಸಮಸ್ಯೆ ಮಾಡಲಾಗುತ್ತಿದೆ. ಈ ದೇಶ ನಮ್ಮದು,  ಈ ದೇಶ ಖಾಕಿ ಚಡ್ಡಿ ಹಾಕಿಕೊಂಡು ಲಾಠಿ ಬೀಸುವ ಆರ್ ಎಸ್ ಎಸ್ ನವರದ್ದಲ್ಲ. ಆರೆಸ್ಸೆಸ್‌ ನವರು ಸ್ವತಂತ್ರ ಹೋರಾಟದಲ್ಲಿ ಕೂಡ ಭಾಗವಹಿಸಿಲ್ಲ ಎಂದು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor