×
Ad

Bidar | ಪರಿಸರ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊಡುಗೆ ಅಪಾರ : ಪ್ರೊ.ಎಸ್.ವಿ.ಕಲ್ಮಠ್

Update: 2026-06-05 16:44 IST

ಬೀದರ್ : ಪರಿಸರದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ರೊ.ಎಸ್.ವಿ.ಕಲ್ಮಠ್ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ವಿವೇಕಾನಂದ ಬಡಾವಣೆಯ ಪಂಚಾಕ್ಷರ ನಿಲಯದಲ್ಲಿರುವ ಕುಮಾರ ಕೃಪಾ ಕೋವಿಡ್ ಗೆದ್ದವರ ಕೈತೋಟದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೌರ ಕಾರ್ಮಿಕರು ಪ್ರತಿನಿತ್ಯ ಮನೆ ಮನೆಗೆ ತೆರಳಿ ಮನೆಯ ಕಸವನ್ನು ಸಂಗ್ರಹಿಸಿ ಸಾಗಿಸುವುದರ ಜೊತೆಗೆ ಬೀದಿಗಳಲ್ಲಿ ಬಿದ್ದಿರುವ ಕೊಳಕು ಹಾಗೂ ದುರ್ವಾಸನೆಯ ಕಸವನ್ನು ಸಹ ಸ್ವಚ್ಛಗೊಳಿಸುತ್ತಾರೆ. ಅವರ ಶ್ರಮದಿಂದ ಮನೆ ಹಾಗೂ ಸುತ್ತಮುತ್ತಲಿನ ಪರಿಸರ ನೈರ್ಮಲ್ಯ ಕಾಪಾಡಲಾಗುತ್ತದೆ. ಅವರು ನಿರ್ವಹಿಸುವ ಸೇವೆಯನ್ನು ಯಾವುದೇ ಕಾರಣಕ್ಕೂ ಕೀಳಾಗಿ ಕಾಣಬಾರದು ಎಂದರು.

ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪೌರ ಕಾರ್ಮಿಕರ ಪಾದ ತೊಳೆದು ಗೌರವ ಸಲ್ಲಿಸಿದ್ದನ್ನು ಸ್ಮರಿಸಿದ ಅವರು, ಸಮಾಜದಲ್ಲಿ ಪೌರ ಕಾರ್ಮಿಕರ ಸೇವೆಗೆ ನೀಡಬೇಕಾದ ಗೌರವದ ಪ್ರತೀಕವಾಗಿತ್ತು ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಪೌರ ಕಾರ್ಮಿಕ ಪ್ರವೀಣ್ ಹಾಗೂ ಗಣೇಶ್ ಅವರನ್ನು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಪಿಎಸ್‌ಐ ವಿಜಯಕುಮಾರ್ ಬೊಗಲೆ, ರಾಜೇಶ್ವರಿ, ಶಾಂಭವಿ, ಸೂರ್ಯಕಾಂತ್ ಮಾಳಗೆ, ದಿಲೀಪಕುಮಾರ್ ಹುಲಸೂರೆ, ಬಬಲು ಹಾಗೂ ಕಲ್ಮಠ ಕುಟುಂಬದ ಸದಸ್ಯರು ಸೇರಿದಂತೆ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News