×
Ad

ಹುಮನಾಬಾದ್ ನಲ್ಲಿ ಎರಡು ಸಾವಿಕ್ಕೂ ಹೆಚ್ಚು ಸಸಿ ವಿತರಣೆ

Update: 2026-06-05 16:49 IST

ಹುಮನಾಬಾದ್ : ಪಟ್ಟಣದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಆಫ್ ಕರ್ನಾಟಕ, ಜಮಾತ್-ಎ-ಇಸ್ಲಾಮಿ, ರೀಫಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡ್ರಸ್ಟ್ರಿ ಹಾಗೂ ಶಾದಾನ್ ಪಬ್ಲಿಕ್ ಸ್ಕೂಲ್ ಸಹ ಭಾಗಿತ್ವದಲ್ಲಿ ಕ್ಲೀನ್ ಅಂಡ್ ಗ್ರೀನ್ ಹುಮನಾಬಾದ್ ಘೋಷವಾಕ್ಯದೊಂದಿಗೆ ಶುಕ್ರವಾರ ಎರಡು ಸಾವಿರಕ್ಕೂ ಹೆಚ್ಚು ಸಸಿ ವಿತರಣೆ ಮಾಡಲಾಯಿತು.

ಪಟ್ಟಣದ ಶಾದಾನ್ ಪಬ್ಲಿಕ್ ಸ್ಕೂಲ್‌ನಿಂದ ಶಿವಾಜಿ ವೃತ್ತ, ಬಸವೇಶ್ವರ್ ವೃತ್ತ, ಸರ್ದಾರ್ ಪಟೇಲ್ ವೃತ್ತ, ಅಂಬೇಡ್ಕರ್ ವೃತ್ತ ವರೆಗೆ ಶಾದಾನ್ ಸ್ಕೂಲ್ ಶಾಲಾ ಮಕ್ಕಳೊಂದಿಗೆ ಹಸಿರೇ ಉಸಿರು, ಕಾಡು ಬೆಳೆಸಿ ನಾಡು ಉಳುಸಿ, ಮನೆಗೊಂದು ಮರ ಉರಿಗೊಂದು ವನ ಎಂಬ ಘೋಷ ವಾಕ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು.

ಮನೆ ಮನೆಗೆ ಹಾಗೂ ಅಂಗಡಿಗಳಿಗೆ ತೆರಳಿ ಸಸಿ ವಿತರಣೆ ಮಾಡಿ ತಮ್ಮ ಮಕ್ಕಳ ಹಾಗೂ ಪ್ರತಿಯೊಬ್ಬರ ಆರೋಗ್ಯಕರ ಜೀವನಕ್ಕೆ ಒಬ್ಬರು ಕನಿಷ್ಠ ಒಂದು ಮರ ಬೆಳೆಸಿ ಎಂದು ವಿನಂತಿ ಮಾಡಲಾಯಿತು.

ಈ ಸಂಧರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್, ಜಿಲ್ಲಾಧ್ಯಕ್ಷ ಶೂಹೇಬ್, ತಾಲೂಕಾಧ್ಯಕ್ಷ ಮುಹಮ್ಮದ್ ಅಬ್ದುಲ್ ಕರೀಮ್, ಬಸವಕಲ್ಯಾಣ ತಾಲೂಕಾಧ್ಯಕ್ಷ ಅಸಾದುಲ್ಲಾ ಖಾನ್, ಜಮಾತ್-ಎ-ಇಸ್ಲಾಮಿಯ ತಾಲೂಕಾಧ್ಯಕ್ಷ ಇಫ್ತೇಕಾರ್ ಅಹ್ಮದ್, ರೇಣುಕಾ ವೀರ ಗಂಗಾಧರ್ ಶ್ರೀ, ಸಂಗಮೇಶ್ ಚಿದ್ರಿ, ಶಾದನ್ ಶಾಲೆಯ ಮುಖ್ಯಸ್ಥ ಮುರ್ತುಜ್ ಹಾಗೂ ರೀಫಾ ಚೇಂಬರ್ ಆಫ್ ಕಾಮರ್ಸ್ ನ ಅಬ್ದುಲ್ ಫಾಹಿಮ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News