×
Ad

Bidar | ಟ್ರ್ಯಾಕ್ಟರ್ ಪಲ್ಟಿ : ಬಾಲಕ ಮೃತ್ಯು

Update: 2026-03-08 20:56 IST

ಬೀದರ್ : ಟ್ರ್ಯಾಕ್ಟರ್ ಪಲ್ಟಿಯಾಗಿ ಬಾಲಕ ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಮದಕಟ್ಟಿ ಕ್ರಾಸ್ ಬಳಿ ರವಿವಾರ ಸಾಯಂಕಾಲ ನಡೆದಿದೆ.

ಮೃತ ಬಾಲಕನನ್ನು ಶೋಹಮ್ (13) ಎಂದು.

ಬಾಜೋಳಗಾ ಕ್ರಾಸ್ ನಿಂದ ಸಾಗುತ್ತಿರುವ ಟ್ರ್ಯಾಕ್ಟರ್ ಮೇಲೆ ಕುಳಿತುಕೊಂಡು ಶಿವಂ ಹೋಗುತ್ತಿದ್ದನು. ಮದಕಟ್ಟಿ ಕ್ರಾಸ್ ಬಳಿ ಸಾಗುತ್ತಿದ್ದಂತೆ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಪರಿಣಾಮವಾಗಿ ಟ್ರ್ಯಾಕ್ಟರ್ ಮೇಲೆ ಕುಳಿತ ಶಿವಂ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಖಟಕ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News