ಹುಮನಾಬಾದ್: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯವಶ್ಯಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಹೇಳಿದರು.

ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶಾಲಾ ಸಾಕ್ಷರತಾ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಮಾಡುವ ಮೂಲಕ ತಾವು ಕಲಿತ ಶಾಲೆ ಹಾಗೂ ತಮ್ಮ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಅವರು ತಿಳಿಸಿದರು.

ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಿಂದ ಆರಂಭಗೊಂಡ ಮೆರವಣಿಗೆಯು ವೀರಭದ್ರೇಶ್ವರ ಅಗ್ನಿಕುಂಡ, ಅಂಬೇಡ್ಕರ್ ವೃತ್ತ, ಬಾಲಾಜಿ ದೇವಸ್ಥಾನ, ನಾಗಣ್ಣ ಕಟ್ಟಿ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ವೀರಭದ್ರೇಶ್ವರ ಕಲ್ಯಾಣ ಮಂಟಪದವರೆಗೆ ಸಾಗಿತು.

ಈ ಸಂದರ್ಭದಲ್ಲಿ ಬಿಇಒ ವೆಂಕಟೇಶ್ ಗೂಡಾಳ್, ರವೀಂದ್ರರೆಡ್ಡಿ ಮಾಲಿಪಾಟೀಲ್, ಆನಂದ್ ಶಿವನಾಯಕ, ಸಾರಿಕಾ ಗಂಗಾ, ಜಗದೀಶ್ ಸಿದ್ದವೀರ, ಮಹೇಬೂಬ್‌ ಪಟೇಲ್, ಮಂಜುನಾಥ್ ದೇವದತ್ತರಾಜ್‌, ಭುವನೇಶ್ವರಿ ಪಾಟೀಲ್, ತ್ಯಾತರಾವ್‌ ಕಾಂಬಳೆ, ಅಮಿತ್‌ ಚಿಂಚೋಳಿಕರ್, ಅಂಬಿಕಾ ಚಳಕಾಪೂರೆ, ಮುರಗೇಂದ್ರ ಸಜ್ಜನಶಟ್ಟಿ, ಶಿವರಾಜ್ ಮೇತ್ರಿ ಹಾಗೂ ಪ್ರಕಾಶ್ ಹೊಗ್ತಾಪೂರೆ ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor