×
Ad

ಹುಮನಾಬಾದ್ | ಜು.18ರಂದು ಬೀದರ್‌ಗೆ ವಿಐಪಿ ಪಕ್ಷದ ಅಧ್ಯಕ್ಷ ಮುಕೇಶ್ ಸಹಾನಿ ಭೇಟಿ

ಟೋಕ್ರಿ ಕೋಳಿ ಸಮಾಜದಿಂದ ಅದ್ದೂರಿ ಸನ್ಮಾನ

Update: 2026-07-10 16:48 IST

ಹುಮನಾಬಾದ್ : ಬಿಹಾರದ ಮಾಜಿ ಸಚಿವ, ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೋಳಿ ಸಮಾಜದ ಪ್ರಮುಖ ನಾಯಕ ಮುಕೇಶ್ ಸಹಾನಿ ಅವರು ಜು.18ರಂದು ಬೀದರ್‌ಗೆ ಆಗಮಿಸಲಿದ್ದು, ನಗರದ ಅಶೋಕಾ ಹೋಟೆಲ್‌ನಲ್ಲಿ ಪಕ್ಷದ ಸಂಘಟನಾ ಸಭೆ ನಡೆಯಲಿದೆ ಎಂದು ಟೋಕ್ರಿ ಕೋಳಿ ಸಮಾಜದ ಮುಖಂಡರು ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಕೇಶ್ ಸಹಾನಿ ಅವರು ಕೋಳಿ ಸಮಾಜದ ಹೆಮ್ಮೆಯ ನಾಯಕರಾಗಿದ್ದು, ಅವರ ಬೀದರ್ ಭೇಟಿಯ ಅಂಗವಾಗಿ ಸಮಾಜದ ವತಿಯಿಂದ ಅದ್ದೂರಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜು.18ರಂದು ನಡೆಯುವ ಸಂಘಟನಾ ಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಟೋಕ್ರಿ ಕೋಳಿ ಸಮಾಜದ ಬಾಂಧವರು, ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಬಸವಕಲ್ಯಾಣದ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮದ ರತ್ನಾಕಾಂತ್ ಶಿವಯೋಗಿ, ಸಮಾಜದ ಪ್ರಮುಖರಾದ ಅಶೋಕ್ ಹಣಕುಣಿ, ದಯಾನಂದ್ ಮೇತ್ರಿ, ಸಿದ್ದು, ಚಂದ್ರಕಾಂತ್, ಶಿವು ದುಬಲಗುಂಡಿ, ಲಖನ್ ಕೋಳಿವಾಡ್, ದೌಲಪ್ಪ, ರವಿ, ಅರುಣ್ ಕೋಡಿ ಹಾಗೂ ಅರುಣ್ ಕಲಬೆನೂರ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News