ಔರಾದ್: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಪ್ರಭು ಚವ್ಹಾಣ್ ಅವರು ಬುಧವಾರ ಕ್ಷೇತ್ರದ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಎನ್‌ಡಿಎ ಅಭ್ಯರ್ಥಿ ಶಶೀಲ್ ಜಿ.ನಮೋಶಿ ಅವರ ಪರವಾಗಿ ಪ್ರಚಾರ ನಡೆಸಿದರು.

ಸಂತಪುರದ ಸಿದ್ಧರಾಮೇಶ್ವರ ಕಾಲೇಜು, ಔರಾದ್ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಪತ್ರಿಸ್ವಾಮಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಹಾಗೂ ಅಮರೇಶ್ವರ ಕಾಲೇಜು ಸೇರಿದಂತೆ ಕ್ಷೇತ್ರದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ ಅವರು, ಶಿಕ್ಷಕರು ಹಾಗೂ ಮತದಾರರನ್ನು ಭೇಟಿಯಾಗಿ ಎನ್‌ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಪರವಾಗಿ ಮತಯಾಚಿಸಿದರು.

ಮತದಾನದ ವೇಳೆ ಪ್ರಾಶಸ್ತ್ಯದ ಮತ ಚಲಾಯಿಸುವಾಗ ಮತದಾರರು ಮಾಡುವ ಸಣ್ಣ ತಪ್ಪುಗಳಿಂದ ಮತಗಳು ತಿರಸ್ಕೃತಗೊಳ್ಳುವ ಸಾಧ್ಯತೆಗಳಿವೆ. ಕಳೆದ ಚುನಾವಣೆಯಲ್ಲಿಯೂ ಸಾವಿರಾರು ಮತಗಳು ತಿರಸ್ಕೃತಗೊಂಡಿವೆ. ಆದ್ದರಿಂದ ಮತದಾನ ಮಾಡುವಾಗ ಪ್ರತಿಯೊಬ್ಬರೂ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.

ಈ ಹಿನ್ನೆಲೆಯಲ್ಲಿ ಪಕ್ಷದಿಂದ ನೇಮಕಗೊಂಡಿರುವ ಘಟನಾಯಕರು ತಮ್ಮ ವ್ಯಾಪ್ತಿಯ ಶಿಕ್ಷಕರಿಗೆ ಮತದಾನದ ಕುರಿತು ಸರಿಯಾದ ಮಾರ್ಗದರ್ಶನ ನೀಡಬೇಕು. ಯಾವುದೇ ಮತ ತಿರಸ್ಕೃತವಾಗದಂತೆ ಅಗತ್ಯ ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ವಸಂತ್ ಬಿರಾದಾರ್, ಧೊಂಡಿಬಾ ನರೋಟೆ, ಶಿವಾಜಿರಾವ್ ಪಾಟೀಲ್ ಮುಂಗನಾಳ್, ಶಿವರಾಜ್ ಅಲ್ಮಾಜೆ, ಪ್ರಕಾಶ್ ಅಲ್ಮಾಜೆ, ಖಂಡೋಬಾ ಕಂಗಟೆ, ಕೇರಬಾ ಪವಾರ್, ದಯಾನಂದ್ ಘೂಳೆ, ಸಂತೋಷ್ ಪೋಕಲವಾರ್, ಸಂಜು ವಡೆಯಾರ್, ಗುಂಡಪ್ಪ ಮುಧಾಳೆ, ಯಾದು ಮೇತ್ರೆ, ಅಶೋಕ್ ಅಲ್ಮಾಜೆ, ಆನಂದ್ ದ್ಯಾಡೆ, ರಾಜಪ್ಪ ಸೋರಾಳೆ, ಶಿವಕುಮಾರ್ ಪಾಂಚಾಳ್, ನಾಗಶೆಟ್ಟಿ ಗಾದಗೆ, ಅಶೋಕ್ ಶೆಂಬೆಳ್ಳಿ, ಸುನೀಲ್ ಸುಸಲಾದೆ, ಸಂಗಮೇಶ್ ದೇಶಮುಖ, ಅಬ್ಜಲ್ ಪಠಾಣ್, ಸುಜಿತ್ ರಾಠೋಡ್, ಧನಾಜಿ ರಾಠೋಡ್, ಮಂಜು ಸ್ವಾಮಿ, ಬಾಲಾಜಿ ಠಾಕೂರ್ ಹಾಗೂ ಅಂಬಾದಾಸ್ ನೇಳಗೆ ಸೇರಿದಂತೆ ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor