×
Ad

ಚಾಮರಾಜನಗರ : ಐದು ಹುಲಿಗಳ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ

Update: 2025-06-28 10:45 IST

ಚಾಮರಾಜನಗರ: ಐದು ಹುಲಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಅರಣ್ಯ ಇಲಾಖೆ ದಸ್ತಗಿರಿ ಮಾಡಿದ್ದಾರೆ. ವಿಷ ಪ್ರಾಶನ ಮಾಡಿದ್ದ ಹಸುವಿನ ಮಾಲೀಕನೂ ಪತ್ತೆಯಾಗಿದ್ದಾನೆ.

ಕೊಪ್ಪ ಗ್ರಾಮದ ಕೋನಪ್ಪ , ಹಸುವಿಗೆ ವಿಷ ಪ್ರಷಾಣ ಮಾಡಿಸಿದ ಮಾದರಾಜ ಬಿನ್ ಶಿವಣ್ಣಗೌಡ ಕೊಪ್ಪ ಗ್ರಾಮ, ಹಾಗೂ ನಾಗರಾಜ ಬಿನ್ ಪೂಜಾರಿಗೌಡ ಕಳ್ಗೋಬೆದೊಡ್ಡಿ (ಕೊಪ್ಪ ಗ್ರಾಮ ಸಮೀಪ) ರವರನ್ನು ಪೊಲೀಸರ ಸಹಕಾರದೊಂದಿಗೆ ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕೃತವಾಗಿ ಧೃಡಪಡಿಸಿದೆ. ಇವರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ವಲಯದ ಮೀಣ್ಯಂ ಸಮೀಪದ ಗಾಜನೂರು ಗಸ್ತ್ ನಲ್ಲಿ ತಾಯಿ ಹುಲಿ ಸೇರಿದಂತೆ ಐದು ಹುಲಿಗಳು ಸಾವಿಗೆ ಮಿಷ ಮಿಶ್ರಿತ ಮಾಂಸ ಸೇವೆನೆ ಎಂಬುದು ಖಚಿತವಾಗಿದೆ.

ಮೃತ ಹುಲಿಗಳ ಬಳಿಯೇ ಹಸುವೊಂದು ಸಾವನ್ನಪ್ಪಿದ್ದು,ಅದರ ಮೇಲೆ ಪೊರೇಟ್ ಕ್ರೀಟನಾಶಕವನ್ನು ಹಾಕಿರುವುದು ಬಯಲಾಗಿದೆ.

ಈ ಮೊದಲು ಆರೇಳು ಮಂದಿ ದನಗಾಹಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಶಿವಣ್ಣಗೌಡ ಹಾಗೂ ಅವರ  ಮಗ ಮಾದರಾಜ ಬಗ್ಗೆ ಶಂಕಾಸ್ಪದ ರೀತಿಯ ಹೇಳಿಕೆ ಕೊಟ್ಟರು. ಇದನ್ನು ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಮನೆಯಲ್ಲಿ ಅಡಗಿ ಕುಳಿತ್ತಿದ್ದ ಶಿವಣ್ಣಗೌಡನ ಮಗ ಮಾದುರಾಜು ಹಾಗೂ ನಾಗರಾಜು ರವರನ್ನು ಬಂಧಿಸಿದ್ದಾರೆ.

ಕಾಡಿನಲ್ಲಿ ಮೇಯಲು ತೆರಳುವ ಹಸುಗಳು ಹುಲಿ ದಾಳಿಯಿಂದ ಸಾವನ್ನಪ್ಪುತ್ತಿದ್ದವು. ಇದರಿಂದ ಬೇಸತ್ತು ಮಾದರಾಜ ಹುಲಿಗೆ ವಿಷವಿಟ್ಟು ವಿಕೃತಿ ಮೆರೆದಿದ್ದಾನೆ .

ಅರಣ್ಯಾಧಿಕಾರಿಗಳು ಬಂಧಿತ ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದು, ಎನ್ ಟಿ ಸಿ ಎ ಮತ್ತು ತನಿಖಾ ತಂಡದವರಿಂದ ತೀವ್ರತರವಾದ ವಿಚಾರಣೆಗೆ ಒಳಪಡಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News