×
Ad

ಚಾಮರಾಜನಗರ | ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವಿರುವ ಪ್ಲೆಕ್ಸ್ ಹರಿದು, ಬುದ್ದನ ವಿಗ್ರಹ ಧ್ವಂಸಗೊಳಿಸಿದ್ದ ಪ್ರಕರಣ; ಆರೋಪಿ ಮಂಜುನಾಥ್ ಬಂಧನ

Update: 2025-11-04 18:25 IST

ಚಾಮರಾಜನಗರ : ತಾಲ್ಲೂಕಿನ ಜ್ಯೋತಿಗೌಡಪುರ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇರುವ ಫ್ಲೆಕ್ಸ್ ವಿರೂಪಗೊಳಿಸಿ, ಬುದ್ದ ವಿಹಾರದಲ್ಲಿದ್ದ ವಿಗ್ರಹವನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ರವರು ಹೇಳಿದರು.

ಚಾಮರಾಜನಗರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೋತಿಗೌಡನಪುರ ಗ್ರಾಮದಲ್ಲಿ ಕಳೆದ 2 ತಿಂಗಳ ಹಿಂದೆ ಮಂಜುನಾಥ್ ಅಲಿಯಾಸ್ ಪೆಂಡಾಲ್ ಎಂಬ ವ್ಯಕ್ತಿ ಮದ್ಯಪಾನ ಮಾಡಿ ಪರಿಶಿಷ್ಟ ಸಮುದಾಯದ ಮಹಿಳೆಯೊಂದಿಗೆ ಜಗಳವಾಡುವ ವೇಳೆ ಚಪ್ಪಲಿಯಿಂದ ಮಹಿಳೆಗೆ ಹೊಡೆದಿದ್ದನು ಎನ್ನುವ ಕಾರಣಕ್ಕೆ ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ಮಾಡಿ 60 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಮಂಜುನಾಥ ಅಕ್ಟೋಬರ್ 23 ರ ರಾತ್ರಿ ಮದ್ಯಪಾನ ಮಾಡಿ ಅಂಬೇಡ್ಕರ್ ಭಾವಚಿತ್ರ ಇರುವ ಫ್ಲೆಕ್ಸ್ ವಿರೂಪಗೊಳಿಸಿ, ಬುದ್ದನ ವಿಗ್ರಹವನ್ನು ಧ್ವಂಸ ಮಾಡಿದ್ದು ದೃಡಪಟ್ಟಿದ್ದು , ಈತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಬಂಧಿತ ಆರೋಪಿ ಮಂಜುನಾಥ್‌ ಮೇಲೆ ದೋಷರೋಪಣಾ ವರದಿ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಡಾ.ಕವಿತಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News