ಚಾಮರಾಜನಗರ: ರೊಚ್ಚಿಗೆದ್ದ ಸಲಗ; ಸಫಾರಿ ವಾಹನ ಮೇಲೆ ದಾಳಿಗೆ ಯತ್ನ
Update: 2025-04-30 07:45 IST
ಚಾಮರಾಜನಗರ : ಕಾಡಿನಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರ ಮೇಲೆ ಕಾಡಾನೆಯೊಂದು ದಾಳಿಗೆ ಯತ್ನಿಸಿದ ಘಟನೆ ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಪಿ.ಜಿ. ಪಾಳ್ಯ ಸಫಾರಿಯಲ್ಲಿ ನಡೆದಿದೆ.
ಎಂದಿನಂತೆ ಪ್ರವಾಸಿಗರು ಮಲೆ ಮಹದೇಶ್ವರ ವನ್ಯ ಜೀವಿಧಾಮದ ಪಿ.ಜಿ.ಪಾಳ್ಯ ಸಫಾರಿಯಲ್ಲಿ ತೆರಳುವಾಗ ಕಾಡಿನಲ್ಲಿ ಒಂಟಿ ಸಲಗವೊಂದು ನಿಂತಿತ್ತು. ಸಫಾರಿಯಲ್ಲಿದ್ದ ಪ್ರವಾಸಿಗರು ನೋಡುತ್ತಿದ್ದಂತೆಯೇ ರೊಚ್ಚಿಗೆದ್ದ ಒಂಟಿ ಸಲಗ ಹಠತ್ತಾಗಿ ದಾಳಿಗೆ ಯತ್ನಿಸಿದೆ.
ಕಾಡಾನೆ ದಾಳಿಗೆ ಬರುತ್ತಿದ್ದಂತೆ ಎಚ್ಚೆದ್ದ ಸಫಾರಿ ವಾಹನ ಚಾಲಕ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡ ಹಿನ್ನಲೆಯಲ್ಲಿ ದಾಳಿಯಿಂದ ಪಾರಾದರು. ಈ ಘಟನೆಯ ದೃಶ್ಯವನ್ನು ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದಾರೆ.