×
Ad

ಚಾಮರಾಜನಗರ | ವಾರದ ಅಂತರದಲ್ಲಿ ನಂಜೇದೇವನಪುರದಲ್ಲಿ ಮತ್ತೊಂದು ಹುಲಿ ಸೆರೆ

Update: 2026-01-09 15:57 IST

ಚಾಮರಾಜನಗರ : ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಗ್ರಾಮದ ಹೊರ ವಲಯದಲ್ಲಿ ವಾರದ ಅಂತರದಲ್ಲಿ ಮತ್ತೊಂದು ಹುಲಿ ಬೋನಿನಲ್ಲಿ ಸೆರೆಯಾಗಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಮುಂಜಾನೆ ಕುಮಾರ ರವರ ಜಮೀನಿನ ಮುಂದೆ ಹುಲಿಯೊಂದು ತಿರುಗಾಡುತ್ತಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತಿದ್ದಂತೆ, ಜಮೀನೊಂದರಲ್ಲಿ ಹುಲಿಗಳ ಸೆರೆಗೆ ಇಡಲಾಗಿದ್ದ ಬೋನ್ಗೆ ಹುಲಿ ಸೆರೆಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ಕಳೆದ ವಾರವೂ ಸಹ ನಂಜೇದೇವನಪುರ ಹೊರವಲಯದಲ್ಲಿ ಕೂಬಿಂಗ್ ವೇಳೆ ಗಂಡು ಹುಲಿ ಸೆರಯಾಗಿತ್ತು. ಇಂದು ಸೆರೆಯಾಗಿರುವ ಹುಲಿ ಸೇರಿದಂತೆ ಎರಡು ಹುಲಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಕಳೆದ ಕೆಲವು ದಿನಗಳ ಹಿಂದೆ ಇದೇ ಜಮೀನಿನ ಮೂಲಕ ಐದು ಹುಲಿಗಳು ಸಂಚಾರ ಮಾಡಿದ್ದು,  ಅದರಲ್ಲಿ ಒಂದು ಹುಲಿ ಶುಕ್ರವಾರ ಬೋನ್ ನಲ್ಲಿ ಸೆರೆಯಾಗಿದೆ. ಉಳಿದ ನಾಲ್ಕು ಹುಲಿಗಳಿಗಾಗಿ ಮತ್ತೇ ಕೂಬಿಂಗ್ ಕಾರ್ಯಚರಣೆ ನಡೆಸಲಾಗುತ್ತದೆ ಎನ್ನಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News