×
Ad

ಚಾಮರಾಜನಗರ: ದೇವಾಲಯದ ಗೋಪುರ ಏರಿ ಆತ್ಮಹತ್ಯೆಗೆ ಯತ್ನ; ವ್ಯಕ್ತಿಯನ್ನು ಕೆಳಗಿಳಿಸಿದ ಪೊಲೀಸರು

Update: 2025-04-13 09:00 IST

ಚಾಮರಾಜನಗರ : ಹನೂರು ತಾಲೂಕಿನ ಪ್ರಸಿದ್ದ ಧಾರ್ಮಿಕ ಸ್ಥಳವಾದ ಮಲೆಮಹದೇಶ್ವರಸ್ವಾಮಿ ದೇವಾಲಯದ ಗೋಪುರದ ಮೇಲೆ ಏರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನೆಡೆದಿದೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ಮೂಲದ ಮೃತ್ಯುಂಜಯ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.

ದೇವಾಲಯದ ರಾಜಗೋಪುರ ಏರಿದ ಆತನನ್ನು ನೆರೆದಿದ್ದ ಭಕ್ತ ಸಮೂಹ ಕೆಳಗಿಳಿಯುವಂತೆ ಕೇಳಿಕೊಂಡರೂ, ಕಿವಿಗೊಡದ ಆತ ಗೋಪುರದ ಮೇಲೆ ಮೇಲೆ ಏರುತ್ತಿದ್ದ. ಈ ಬಗ್ಗೆ ಮಾಹಿತಿ ತಿಳಿದ ಮಹದೇಶ್ವರಬೆಟ್ಟ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ನೆರೆದಿದ್ದ ಭಕ್ತರ ಸಹಕಾರದೊಂದಿಗೆ ಆತನನ್ನು ಮನವೊಲಿಸಿ ಕೆಳಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವೇಳೆ ವ್ಯಕ್ತಿ ಪಂಚೆ ಬಿಟ್ಟರೆ ಮೈಮೇಲೆ ಮತ್ಯಾವ ಬಟ್ಟೆ ಇಲ್ಲದೆ ಮಾನಸಿಕ ಅಸ್ವಸ್ಥನಂತೆ ವರ್ತಿಸಿದ್ದ ಎನ್ನಲಾಗಿದೆ.

ನಂತರ ಪೊಲೀಸರೇ ಬಟ್ಟೆ ಕೊಡಿಸಿ, ಬಸ್ ಚಾರ್ಜ್ ಗೆ ಹಣ ನೀಡಿ ಗ್ರಾಮಕ್ಕೆ ವಾಪಸ್ ಕಳಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News