×
Ad

ಚಾಮರಾಜನಗರ : ಅಪಾಯಕಾರಿ ಚಾಲನೆ, ಆಟೋ ವೀಲ್ಹಿಂಗ್; ಪ್ರಕರಣ ದಾಖಲು

Update: 2025-07-25 08:15 IST

ಚಾಮರಾಜನಗರ :  ರಸ್ತೆಯಲ್ಲಿ ಅಪಾಯಕಾರಿ ಚಾಲನೆ ಹಾಗೂ ಆಟೋ ವೀಲ್ಹಿಂಗ್ ಮಾಡುತ್ತಿದ್ದ ಮೂರು ಆಟೋಗಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಮಲೆ ಮಹದೇಶ್ವರ ಬೆಟ್ಟದ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಮೂರು ಆಟೋ ಚಾಲಕರು ಅಜಾಗರೂಕತೆ ಚಾಲನೆ ಮತ್ತು ಆಟೋ ವೀಲ್ಹಿಂಗ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಆಟೋ ವೀಲ್ಹಿಂಗ್ ದೃಶ್ಯ ವೈರಲ್ ಆಗಿದ್ದು, ಅದನ್ನು ಗಮನಿಸಿದ ಮಹದೇಶ್ವರ ಬೆಟ್ಟ ಪೊಲೀಸರು ಆಟೋಗಳನ್ನು ಪತ್ತೆ ಹಚ್ಚಿ ವಶ ಪಡಿಸಿಕೊಂಡು, ಆಟೋ ಚಾಲಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News