×
Ad

ಚಾಮರಾಜನಗರ: ಕಾಡಾನೆ ದಾಳಿಗೆ ರೈತ ಬಲಿ

Update: 2025-04-30 09:00 IST

ಮೃತದೇಹದ ಬಳಿ ಜನ ಜಮಾಯಿಸಿರುವುದು

ಚಾಮರಾಜನಗರ: ಕಾಡಾನೆ ದಾಳಿಯಿಂದ ರೈತರೊಬ್ಬರು ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಕೊರಮನಕತ್ತರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮೃತ ರೈತನನ್ನು ಕೊರಮನಕತ್ತರಿ ನಂಜಪ್ಪ (60) ಎಂದು ಗುರುತಿಸಲಾಗಿದೆ.

ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಪಿ.ಜಿ. ಪಾಳ್ಯ ಬೀಟ್ ಸಮೀಪದ ತೋಟದ‌ಮನೆಯಲ್ಲಿ ವಾಸ ಇರುವ ಇವರು ಒಕ್ಕಣೆ ಮಾಡಲಾಗಿದ್ದ ಅರಿಶಿಣವನ್ನು ರಾತ್ರಿ ವೇಳೆ ಕಾವಲು ಕಾಯುತ್ತಿದ್ದಂತಹ ಸಂದರ್ಭದಲ್ಲಿ ಆನೆ ದಾಳಿ ಮಾಡಿದೆ ಎನ್ನಲಾಗಿದೆ.

ಮಾಹಿತಿ ಅರಿತು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ,ಪೊಲೀಸರು ಮುಂದಿನ ಕ್ರಮಕ್ಕೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News