ಚಾಮರಾಜನಗರ | ಮತಗಟ್ಟೆ ಧ್ವಂಸ ಪ್ರಕರಣ : 36ಕ್ಕೂ ಹೆಚ್ಚು ಮಂದಿಯ ಬಂಧನ

Update: 2024-04-27 14:29 GMT

ಹನೂರು : ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಪ್ರಕರಣರಕ್ಕೆ ಸಂಬಂದಿಸಿದಂತೆ ಮಹಿಳೆಯರು ಸೇರಿದಂತೆ ಒಟ್ಟು 36ಕ್ಕೂ ಹೆಚ್ಚು ಮಂದಿಯನ್ನು ಮಹದೇಶ್ವರಬೆಟ್ಟ ಪೋಲಿಸರು ಬಂಧಿಸಿರುವುದಾಗಿ ವರದಿಯಾಗಿದೆ.

ಲೋಕಸಭಾ ಚುನಾವಣೆಯ ಮತದಾನದ ದಿನದಂದು ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಮತದಾರರು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದರು.

ಈ ನಡುವೆ ಅಧಿಕಾರಿಗಳು ಮತಚಲಾಯಿಸುವಂತೆ ಮನವೊಲಿಕೆ ಮಾಡಿಲು ಮುಂದಾಗಿ ಕೆಲವರು ಮತಚಲಾಯಿಸಲು ತೆರಳುತ್ತಿದ್ದಂತೆ, ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮತಗಟ್ಟೆಗೆ ನುಗ್ಗಿದ ಕೆಲವರು ಕಲ್ಲು ತೂರಾಟ ನೆಡೆಸಿ ಮತಯಂತ್ರ ಧ್ವಂಸ ಮಾಡಿದ್ದಲ್ಲದೆ, ಈ ಘಟನೆಯಲ್ಲಿ ತಹಸೀಲ್ದಾರ್ ಸೇರಿದಂತೆ ಕೆಲ ಅಧಿಕಾರಿಗಳಿಗೆ ಪೆಟ್ಟಾಗಿದೆ. ಈ ಹಿನ್ನಲೆ ಗ್ರಾಮಸ್ಥರ ಮೇಲೆ ಮಹದೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೆ ಸುಮಾರು 36 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಮತಗಟ್ಟೆ ಮೇಲೆ ದಾಳಿ ಧ್ವಂಸ ಪ್ರಕರಣದಲ್ಲಿ ತಹಸೀಲ್ದಾರ್ ಗುರುಪ್ರಸಾದ್, ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್, ಮತಗಟ್ಟೆ ಅಧಿಕಾರಿ ಬಸವಣ್ಣ, ಗ್ರಾಮ ಆಡಳಿತಾಧಿಕಾರಿ ವಿನೋದ್ ಪಿಡಿಒ ಕಿರಣ್ ಕುಮಾರ್ ಸೇರಿದಂತೆ 15 ಮಂದಿ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆದಿದ್ದು, ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿಗಳು ಪ್ರತ್ಯೇಕ ದೂರು ದಾಖಲಿಸಿ, ಸುಮಾರು 300 ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News