×
Ad

ಚಾಮರಾಜನಗರ : ಹುಲಿಗಳ ಸಾವು ಪ್ರಕರಣ; ನ್ಯಾಯಾಲಯಕ್ಕೆ ಹಾಜರಾದ ಆರೋಪಿಗಳು

Update: 2025-06-30 12:00 IST

ಚಾಮರಾಜನಗರ : ಹನೂರು ತಾಲ್ಲೂಕಿನ ಮೀಣ್ಯಂ ಅರಣ್ಯದಲ್ಲಿ ಐದು ಹುಲಿಗಳ ಸಾವಿಗೆ ಕಾರಣರಾದ ಮೂವರು ಆರೋಪಿಗಳನ್ನು ಹನೂರಿನಲ್ಲಿರುವ ನ್ಯಾಯಾಲಯಕ್ಕೆ ಅರಣ್ಯಾಧಿಕಾರಿಗಳು ಹಾಜರುಪಡಿಸಿದರು.

ಹನೂರಿನಲ್ಲಿರುವ ಅಪರ ಸಿವಿಲ್ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಸೋಮವಾರ ಬೆಳಗ್ಗೆ 11 ಗಂಟೆಯ ಸಮಯಲ್ಲಿ ಹನೂರಿನ ಸಹಾಯಕ ಅರಣ್ಯಾಧಿಕಾರಿ ಗಜಾನನ ಹೆಗಡೆ ಹಾಗೂ ಪ್ರೋಬೇಷನರಿ ಎಸಿಎಫ್ ಉಮಾಪತಿ ಮತ್ತು ಆರ್ ಎಫ್ ಓ ಮಾದೇಶ್ ರವರು ಅರಣ್ಯ ಸಿಬ್ಬಂದಿಗಳ ಬೆಂಗಾವಲಲ್ಲಿ ಹುಲಿ ಸಾವಿನ ಪ್ರಕರಣದ ಆರೋಪಿಗಳಾದ ಮಾದರಾಜು, ನಾಗರಾಜು ಮತ್ತು ಕೋನಪ್ಪ ರವರನ್ನು ಕರೆದುಕೊಂಡು ಬಂದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News