ಚಾಮರಾಜನಗರ : ಆಟೋ ಮಗುಚಿ ಇಬ್ಬರು ಮೃತ್ಯು
ಚಾಮರಾಜನಗರ : ಆಟೋ ಮಗುಚಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ಕೊಳ್ಳೇಗಾಲ ತಾಲೂಕಿನ ನರಿಪುರ-ಮಧುವನಹಳ್ಳಿ ಬೈಪಾಸ್ ಮುಖ್ಯರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮೃತ ವ್ಯಕ್ತಿಯನ್ನು ಬೆಂಗಳೂರು ರಾಜಗೋಪಾಲನಗರ ನಿವಾಸಿ ಮನೋಜ್ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಹೆಸರು ತಿಳಿಯಬೇಕಿದೆ. ಲಕ್ಷ್ಮಿಕಾಂತ್ ಎಂಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ
ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನರಿಪುರ-ಮಧುವನಹಳ್ಳಿ ಬೈಪಾಸ್ ಮುಖ್ಯ ರಸ್ತೆಯಲ್ಲಿರುವ ಮಧುವನಹಳ್ಳಿ ಪ್ರದೀಪ್ ಎಂಬುವವರ ಜಮೀನಿನ ಹತ್ತಿರ ಘಟನೆ ನಡೆದಿದೆ.
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಗೊಂಡ ಲಕ್ಷ್ಮಿಕಾಂತ್ ಎಂಬ ವ್ಯಕ್ತಿಯನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾದೆ.
ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೆಲುವರಾಜು ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ರವೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.