Gundlupete | ಹುಲಿ ದಾಳಿಗೆ ಫಾರೆಸ್ಟ್ ವಾಚರ್ ಮೃತ್ಯು
ಸಣ್ಣ ಹೈದ(56)/ಹುಲಿ(ಸಾಂದರ್ಭಿಕ ಚಿತ್ರ PC :freepik)
ಚಾಮರಾಜನಗರ : ಹುಲಿ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ತಾಲೂಕಿನ ಮರಳಹಳ್ಳ ವ್ಯಾಪ್ತಿಯಲ್ಲಿ ನಡೆದಿದೆ.
ಸಣ್ಣ ಹೈದ(56) ಮೃತ ಅರಣ್ಯ ಸಿಬ್ಬಂದಿ. ಘಟನಾ ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಿಸಿಎಫ್ ಪ್ರಭಾಕರನ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸಣ್ಣ ಹೈದ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ನ ಮರಳಹಳ್ಳದ ಕಳ್ಳಬೇಟೆ ಶಿಬಿರದಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದರು. ದಿನ ನಿತ್ಯ ಬೀಟ್ಗೆ ಹೋಗುವ ಹಾಗೆ ತನ್ನ ಕ್ಯಾಂಪ್ನ 4 ಮಂದಿ ಜೊತೆ ಇಂದು ಮಧ್ಯಾಹ್ನ ಸಣ್ಣಹೈದ ಬೀಟ್ ಗೆ ಹೋಗಿದ್ದರು. ಈ ವೇಳೆ ಹಠಾತ್ತನೆ ಹುಲಿವೊಂದು ಸಣ್ಣ ಹೈದನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ತಕ್ಷಣವೇ ಅಲರ್ಟ್ ಅದ ಜೊತೆಗಿದ್ದ ಸಿಬ್ಬಂದಿ ಕೂಗಿಕೊಂಡ ಪರಿಣಾಮ ಹುಲಿ ಪರಾರಿಯಾಗಿದೆ. ಆದರೆ ಸಣ್ಣ ಹೈದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.