×
Ad

ಹನೂರು | ಗುಂಡಾಲ್ ಅಣೆಕಟ್ಟೆ ಅರಣ್ಯ ಪ್ರದೇಶದಲ್ಲಿ ಹೆಣ್ಣು ಹುಲಿಯ ಕಳೇಬರ ಪತ್ತೆ

Update: 2024-06-22 21:32 IST

ಹನೂರು : ಹನೂರು ತಾಲೂಕಿನ ಲೊಕ್ಕನಹಳ್ಳಿ‌‌ ಸಮೀಪದ ಗುಂಡಾಲ್ ಅಣೆಕಟ್ಟೆ ಬಳಿ ಸುಮಾರು 8 ವರ್ಷ ಪ್ರಾಯದ ಹೆಣ್ಣು ಹುಲಿಯೊಂದರ ಕಳೇಬರ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ‌  ಗುಂಡಾಲ್ ಅಣೆಕಟ್ಟೆ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುವಾಗ ಹುಲಿಯ ಕಳೇಬರ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಪಶು ವೈದ್ಯ ವಸೀಮ್ ಹಾಗೂ ಸ್ಥಳೀಯ ಪಶು ವೈದ್ಯಾಧಿಕಾರಿ ಶಿವರಾಮ್ ಅವರು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಪ್ರಕ್ರಿಯೆಯನ್ನು ಕೈಗೊಂಡರು.

ಈ ಕುರಿತು ಪ್ರತಿಕ್ರಿಯಿಸಿರುವ ಬಿಆರ್ ಟಿ ಹುಲಿ ಸಂರಕ್ಷಿತಾರಣ್ಯದ ಡಿಎಫ್‌ಒ ದೀಪಾ‌.ಜೆ ಅವರು, ʼಮೃತಪಟ್ಟಿರುವಂತಹ ಹೆಣ್ಣು ಹುಲಿಯ ಎಲ್ಲಾ ಉಗುರುಗಳು ಮತ್ತು ಕೋರೆಹಲ್ಲುಗಳು ಹಾಗೇ ಇದ್ದವು. ಇದು ಸಹಜ ಸಾವಾಗಿದೆʼ ಎಂದು ಮಾಹಿತಿ ನೀಡಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News