×
Ad

ಹನೂರು | ಅನಾರೋಗ್ಯಪೀಡಿತ ವ್ಯಕ್ತಿಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ದಾಖಲು

Update: 2025-04-01 23:30 IST

ಚಾಮರಾಜನಗರ : ರಸ್ತೆ ಸರಿ ಇಲ್ಲದೆ, ವಾಹನ ಸೌಲಭ್ಯ ಇಲ್ಲದಿರುವುದರಿಂದ ವಾಂತಿಭೇದಿಯಿಂದ ಅನಾರೋಗ್ಯಪೀಡಿತ ವ್ಯಕ್ತಿಯೋರ್ವನನ್ನು (ನ್ಯಾನ ಕಟ್ಟಿ) ಡೋಲಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ತುಳಸಿಕೆರೆ ಗ್ರಾಮದಲ್ಲಿ ಸೋಮವಾರ ಸಂಜೆ ವರದಿಯಾಗಿದೆ.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬೆರಳಿಕೆ ದೂರದಲ್ಲಿರುವ ತುಳಸಿಕೆರೆ ಗ್ರಾಮದ ನಿವಾಸಿ ಪುಟ್ಟ ಎಂಬವರು ವಾಂತಿಭೇದಿಯಿಂದ ಅನಾರೋಗ್ಯ ಒಳಗಾಗಿದ್ದದ್ದರು. ಅವರನ್ನು ಗ್ರಾಮದ ನಿವಾಸಿಗಳು ರಸ್ತೆ ಸರಿ ಇಲ್ಲದ ಕಾರಣ ವಾಹನ ಸೌಲಭ್ಯವು ಸಿಗದೇ ನ್ಯಾನೆ ಕಟ್ಟಿ (ಡೋಲಿ)ಯಲ್ಲಿ ಮಲೆ ಮಹದೇಶ್ವರ ಬೆಟ್ಟದ ವರೆಗೆ ನಾಲ್ವರು ಹೊತ್ತುಕೊಂಡು ಸಾಗಿ ಅಲ್ಲಿಂದ ತಮಿಳುನಾಡಿನ ಕೊಳತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ಮಾಜಿ ಸದಸ್ಯ ಕೆಂಪೇಗೌಡ ಮಾತನಾಡಿ, ಯಾವುದೇ ಸರಕಾರವಾಗಲಿ, ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳು ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಬರುವ ಗ್ರಾಮಗಳನ್ನು ಕಡೆಗಣಿಸಿದ್ದು, ಅರಣ್ಯದಂಚಿನಲ್ಲಿ ಬರುವ ಕುಗ್ರಾಮಗಳ ಜನರ ಕಷ್ಟಗಳನ್ನು ಅರಿಯದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಕ್ಷೇತ್ರದ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಪಡಿಸಿ ಗ್ರಾಮಗಳಿಗೆ ನೀಡಿರುವ ಭರವಸೆಯಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಇಲ್ಲದಿದ್ದರೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಕೆಂಪೇಗೌಡ ಸೇರಿದಂತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News