×
Ad

ಹನೂರು | ಕಂಬಕ್ಕೆ ಕಟ್ಟಿ ಮಹಿಳೆಗೆ ಹಲ್ಲೆ: ಇಬ್ಬರ ಬಂಧನ

Update: 2026-01-25 00:04 IST

ಹನೂರು: ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಜಿ.ಆರ್.ನಗರ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಹಲ್ಲೆಗೊಳಗಾದವರನ್ನು ಜಿ.ಆರ್.ನಗರ ಗ್ರಾಮದ ಕಣ್ಣಮ್ಮ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಹನೂರು ತಾಲೂಕಿನ ಜಿ.ಆರ್.ನಗರ ಗ್ರಾಮದಲ್ಲಿ ಕಣ್ಣಮ್ಮ ಎಂಬವರು ತನ್ನ ಜಮೀನಿನಲ್ಲಿ ಬೆಳೆದ ಹುರುಳಿಯನ್ನು ಸೆಲ್ವಿ ಎಂಬವರ ಜಾನುವಾರುಗಳು ಮೇಯ್ದು ನಾಶಪಡಿಸಿದ್ದಕ್ಕಾಗಿ ಕಣ್ಣಮ್ಮ ಮತ್ತು ಸೆಲ್ವಿ ಕುಟುಂಬದವರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಸೆಲ್ವಿ, ಮಂಜು ಮತ್ತು ಅಂಗಮುತ್ತು ಎಂಬವರು ಕಣ್ಣಮ್ಮನನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿರುವ ವೀಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಮಾಪುರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಂಜು ಮತ್ತು ಅಂಗಮುತ್ತು ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಮುತ್ತುರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News