ಹನೂರು: ಮಗನಿಂದಲೇ ತಂದೆಯ ಹತ್ಯೆ
Update: 2025-09-22 10:52 IST
ಚಾಮರಾಜನಗರ: ಮಗನೇ ತಂದೆಯನ್ನು ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸಂದ್ಯಾಯನಪಾಳ್ಯ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.
ಸಂದ್ಯಾಯನಪಾಳ್ಯ ಗ್ರಾಮ ನಿವಾಸಿ ಪಾಕಿಯನಾಥನ್ (55) ಕೊಲೆಯಾದವರು. ಅವರ ಪುತ್ರ ಜಾನ್ಸನ್ ಕೊಲೆ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾನ್ಸನ್ ಅಪನಂಬಿಕೆಗೆ ಒಳಗಾಗಿ ತನ್ನ ಪತ್ನಿಯೊಂದಿಗೆ ತಂದೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಅನುಮಾನಿಸುತ್ತಿದ್ದ. ಇದೇ ಕಾರಣಕ್ಕೆ ರವಿವಾರ ರಾತ್ರಿ ತಂದೆ-ಮಗನ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಜಾನ್ಸನ್ ಕಲ್ಲಿನಿಂದ ಪಾಕಿಯನಾಥನ್ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮವಾಗಿ ಪಾಕಿಯನಾಥನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.