ಹನೂರು | ಸೊಂಡಿಲಿಗೆ ಗಾಯ; ನೀರು ಕುಡಿಯಲು ಪರಿತಪ್ಪಿಸುತ್ತಿರುವ ಕಾಡಾನೆಯ ವಿಡಿಯೋ ವೈರಲ್
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹಶ್ವರಬೆಟ್ಟದ ಪಾಲಾರ್ ರಸ್ತೆಯಲ್ಲಿರುವ ಇಂಡಿಬಸಪ್ಪನ ದೇವಸ್ಥಾನದ ಬಳಿ ಕಾಡಾನೆಯೊಂದರ ಸೊಂಡಿಲಿಗೆ ಪೆಟ್ಟಾಗಿ ನೀರು ಕುಡಿಯಲು ಪರಿತಪ್ಪಿಸುತ್ತಿರುವ ಘಟನೆ ನಡೆದಿದೆ.
ಪಾಲಾರ್ ರಸ್ತೆಯಲ್ಲಿರುವ ಇಂಡಿಬಸಪ್ಪನ ದೇವಸ್ಥಾನದ ಹತ್ತಿರ ಇರುವ ನೀರಿನ ತೊಟ್ಟಿಗೆ ನೀರು ಕುಡಿಯಲು ಬಂದ ಆನೆಯೊಂದು ಸೊಂಡಿಲಿಗೆ ಪೆಟ್ಟಾಗಿ ತೊಂದರೆ ಅನುಭವಿಸುತ್ತಿರುವ ದೃಶ್ಯ ಸ್ಥಳೀಯರ ಗಮನಕ್ಕೆ ಬಂದಿದೆ.
ಈ ವೇಳೆ ಆನೆ ಸರಿಯಾಗಿ ನೀರು ಕುಡಿಯಲಾಗದೆ ಪರಿತಪಿಸುತ್ತಿರುವುದನ್ನು ಕಂಡ ಸ್ಥಳೀಯರು ಮರುಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಈ ದೃಶ್ಯದ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆದು, ಗಾಯಗೊಂಡ ಆನೆಗೆ ತಕ್ಷಣ ವೈದ್ಯಕೀಯ ನೆರವು ನೀಡಬೇಕೆಂದು ಆಗ್ರಹಿಸಿದ್ದಾರೆ.
ಹನೂರು | ಸೊಂಡಿಲಿಗೆ ಗಾಯ; ನೀರು ಕುಡಿಯಲು ಪರಿತಪ್ಪಿಸುತ್ತಿರುವ ಕಾಡಾನೆಯ ವಿಡಿಯೋ ವೈರಲ್ https://t.co/30fVySXH3S pic.twitter.com/Qvpo0tqh3I
— ವಾರ್ತಾ ಭಾರತಿ | Vartha Bharati (@varthabharati) July 26, 2025