ಜಾಲಹಳ್ಳಿ: ನಾಯಿಯನ್ನು ರಕ್ಷಿಸಲು ಹೋದ ವ್ಯಕ್ತಿ ವಿದ್ಯುತ್ ತಂತಿ ತಗುಲಿ ಮೃತ್ಯು
Update: 2025-04-30 11:45 IST
ಚಾಮರಾಜನಗರ : ವಿದ್ಯುತ್ ತಂತಿಗೆ ಸಿಲುಕಿದ ನಾಯಿಯನ್ನು ಉಳಿಸಲು ಹೋದ ವ್ಯಕ್ತಿಗೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ ಘಟನೆ ಜಾಲಹಳ್ಳಿ ಹುಂಡಿ ಹೊಸ ಬಡಾವಣೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಜಾಲಹಳ್ಳಿ ಹುಂಡಿ ಹೊಸ ಬಡಾವಣೆಯ ಚಂದ್ರು (40) ಮೃತ ವ್ಯಕ್ತಿ. ಇಲ್ಲಿನ ಎಪಿಎಸ್ ಹೀರೋ ಶೋ ರೂಂ ಹಿಂಭಾಗದಲ್ಲಿ ವಿದ್ಯುತ್ ತಂತಿಗೆ ಸಾಕು ನಾಯಿಯೊಂದು ಸಿಲುಕಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದುದನ್ನು ಕಂಡ ಅವರು, ಆ ಮೂಕ ಪ್ರಾಣಿಯನ್ನು ರಕ್ಷಿಸಲು ಹೋಗಿ ವಿದ್ಯುತ್ ಸ್ಪರ್ಶಕ್ಕೆ ಒಳಗಾದರು.
ಕೂಡಲೇ ನೆರೆಹೊರೆಯವರು ಚಂದ್ರುರವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪಿದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.