×
Ad

ಕೊಳ್ಳೇಗಾಲ | ಅಪರೂಪದ ನಕ್ಷತ್ರ ಆಮೆ ಸಾಗಾಟ : ಇಬ್ಬರ ಬಂಧನ

Update: 2024-10-16 21:31 IST

ಕೊಳ್ಳೇಗಾಲ : ಅಪರೂಪದ ನಕ್ಷತ್ರ ಆಮೆಯನ್ನು ಸಾಗಿಸುತ್ತಿದ್ದ ಇಬ್ಬರನ್ನು ಬುಧವಾರ ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ.

ಕೊಳ್ಳೇಗಾಲ ಅರಣ್ಯ ಸಂಚಾರ ದಳದ ಉಪ ನಿರೀಕ್ಷಕ ವಿಜಯರಾಜ್ ನೇತೃತ್ವದ ತಂಡವು ತಾಲೂಕಿನ ಮದ್ದೂರು ಗ್ರಾಮದ ಎಳೆಪಿಳ್ಳಾರಿ ದೇಗುಲದ ಬಳಿ ಇರುವ ಕೊಳದಲ್ಲಿ ಆರೋಪಿಗಳು, ನಕ್ಷತ್ರ ಆಮೆಯನ್ನು ಹಿಡಿದು ಸಾಗಿಸಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ.

ಈ ಸಂಬಂಧ ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಕೋಡಿವೂರು ಗ್ರಾಮದ ಕಾಳಪ್ಪ ರಾಮಪ್ಪ, ಚಾಮರಾಜನಗರ ಜಿಲ್ಲೆಯ ಮಲ್ಲಿಗೆಬಾವಿದೊಡ್ಡಿ ಗ್ರಾಮದ ಮುತ್ತುರಾಜ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ನಕ್ಷತ್ರ ಆಮೆ, ಬೈಕ್ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News