×
Ad

ಕೊಳ್ಳೇಗಾಲ: ಚಿರತೆಯ ಬೆನ್ನಟ್ಟಿ ಹೊತ್ತೊಯ್ದ ಕುರಿಯನ್ನು ಬಿಡಿಸಿಕೊಂಡು ಬಂದ ಕುರಿಗಾಹಿ

Update: 2024-09-14 08:25 IST

ಚಾಮರಾಜನಗರ : ಕುರಿ ಮಂದೆಯಿಂದ ಕುರಿಯೊಂದನ್ನು ಹೊತ್ತೊಯ್ದ ಚಿರತೆಯನ್ನು ಬೆನ್ನಟ್ಟಿದ ಕುರಿಗಾಹಿಯೊಬ್ಬ ಕುರಿಯನ್ನು ಬಿಡಿಸಿಕೊಂಡು ಬಂದ ಘಟನೆ ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯ ಗ್ರಾಮದ ಮುದುಮಲೆಯ ಗುಡ್ಡದ ಸಮೀಪ ನಡೆದಿರುವ ಬಗ್ಗೆ ವರದಿಯಾಗಿದೆ.

ಚಿರತೆಯೊಂದು ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿ ಒಂದು ಕುರಿಯನ್ನು ಎಳೆದೊಯ್ಯುತ್ತಿತ್ತು. ಇದನ್ನು ಗಮನಿಸಿದ ಕುರಿಗಾಹಿ ಚಿರತೆಯನ್ನು ಬೆನ್ನಟ್ಟಿಕೊಂಡು ಹೋದಾಗ ಚಿರತೆಯು ಗಾಬರಿಯಿಂದ ಕುರಿಯನ್ನು ಬಿಟ್ಟು ನೀರಿನ ಪೈಪಿನೊಳಗೆ ಸೇರಿಕೊಂಡಿದೆ ಎನ್ನಲಾಗಿದೆ.

ಮಾಹಿತಿ ತಿಳಿಯುತ್ತಲೇ ಸುತ್ತಮುತ್ತಲ ರೈತರು ಮತ್ತು ಕುರಿಗಾಹಿಗಳು ಸ್ಥಳದಲ್ಲಿ ಜಮಾಯಿಸಿದರು.  ತಕ್ಷಣವೇ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಬೋನು ಸಮೇತ  ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು  ಚಿರತೆಯನ್ನು ಸೆರೆ ಹಿಡಿದಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News