×
Ad

ಕೊಳ್ಳೇಗಾಲ | ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಯಲ್ಲಿ ಬೆಂಕಿ: ಅಪಾರ ನಷ್ಟ

Update: 2026-01-01 10:41 IST

ಚಾಮರಾಜನಗರ : ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟವಾಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ.

ಕೊಳ್ಳೇಗಾಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿಯಲ್ಲಿ ಕಳೆದ ರಾತ್ರಿ 8:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಧಗಧಗನೆ ಹೊತ್ತಿ ಉರಿಯಲಾರಂಭಿಸಿದೆ. ಬೆಂಕಿಯಿಂದ ನಿರ್ಮಾಣವಾದ ಹೊಗೆಯು ಪಕ್ಕದ ಮಯೂರ ಬೇಕರಿಗೆ ಹಾಗೂ ರಸ್ತೆಗೆ ಆವರಿಸಿತು. ನೋಡು ನೋಡುತ್ತಲೆ ಬೆಂಕಿಯ ಕೆನ್ನಾಲಗೆ 108 ಅಡಿ ಉದ್ದವಿರುವ ಸಾಕಮ್ಮಸ್ ಅಂಗಡಿಯನ್ನು ಹಬ್ಬಿತು.

ಬೆಂಕಿಯ ತೀವ್ರತೆ ಕಂಡು ಅಕ್ಕಪಕ್ಕವಿದ್ದ ಅಂಗಡಿ- ಮುಂಗಟ್ಟುಗಳು ಬಾಗಿಲು ಬಂದ್ ಮಾಡ ಲಾಯಿತು. ಮಾಹಿತಿ ತಿಳಿದ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗ ಮಿಸಿ ಅಂಗಡಿ ಬಾಗಿಲು ಹೊಡೆದು ಬೆಂಕಿ ನಂದಿ ಸಲು ಹರ ಸಾಹಸಪಟ್ಟರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದರು.

ಹೊಸ ವರ್ಷ ಆಚರಣೆಗೆ ಮಯೂರ ಬೇಕರಿಯಲ್ಲಿ ಸಿದ್ಧಪಡಿಸಿದ್ದ ಸಿಹಿ ತಿಂಡಿಗಳು ಹಾಗೂ ಕೇಕ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸೊತ್ತ ಹಾನಿಯಾಗಿವೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News