ಹನೂರು| ಆಕಸ್ಮಿಕ ಬೆಂಕಿ : 40 ಟನ್ ಸಕ್ಕರೆ ಸಮೇತ ಇಡೀ ಲಾರಿ ಭಸ್ಮ
Update: 2025-10-06 23:52 IST
ಚಾಮರಾಜನಗರ : ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಿಂದ ತಮಿಳುನಾಡಿಗೆ ತೆರಳುತ್ತಿದ್ದ ಲಾರಿಯು ಬೆಂಕಿಗೆ ಆಹುತಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ರಾಜ್ಯದ ಗಡಿಭಾಗವಾದ ಬರಗೂರು ಸಮೀಪ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಸೈಯದ್ ಸಲ್ಮಾನ್ ಅವರಿಗೆ ಸೇರಿದ 16 ಚಕ್ರದ ಲಾರಿ ಇದಾಗಿದ್ದು ಸಕ್ಕರೆ ತುಂಬಿದ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಮದ್ದೂರು ಕೊಪ್ಪದಿಂದ ತಮಿಳುನಾಡಿನ ತಿರುನಲ್ವೇಲಿ ಪಟ್ಟಣಕ್ಕೆ 40 ಟನ್ ಸಕ್ಕರೆ ತುಂಬಿಕೊಂಡು ತೆರಳುತ್ತಿದ್ದಾಗ ತಮಿಳುನಾಡಿನ ಬರಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಸಕ್ಕರೆ ಸಮೇತ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.