×
Ad

ವಯನಾಡು ಭೂಕುಸಿತ | ಕಣ್ಮರೆಯಾಗಿದ್ದ ಚಾಮರಾಜನಗರದ ವ್ಯಕ್ತಿಯ ಮೃತದೇಹ ಪತ್ತೆ

Update: 2024-08-01 11:25 IST

ರಾಜೇಂದ್ರ

ಚಾಮರಾಜನಗರ : ಕೇರಳದ ವಯನಾಡು ಗುಡ್ಡ ಕುಸಿತ ಪ್ರಕರಣದಲ್ಲಿ ಕಣ್ಮರೆಯಾಗಿದ್ದ ಚಾಮರಾಜನಗರ ಜಿಲ್ಲೆಯ ರಾಜೇಂದ್ರ ಅವರ ಮೃತದೇಹ ಪತ್ತೆಯಾಗಿದೆ. ಬುಧವಾರ ರಾತ್ರಿ 9.30 ಕ್ಕೆ ಕೇರಳದ ಮೇಪ್ಪಾಡಿಯ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸದ್ಯ ಅವರ ಪತ್ನಿ ರತ್ನಮ್ಮ ಅವರ ಮೃತದೇಹ ಪತ್ತೆಯಾಗಿಲ್ಲ.

 ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ಸಿಲುಕಿ ಚಾಮರಾಜನಗರ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದರೆ,  ಇರಸವಾಡಿ ಗ್ರಾಮದ ನಿವಾಸಿಗಳಾದ ರಾಜೇಂದ್ರ ಹಾಗೂ ರತ್ನಮ್ಮ ಕಣ್ಮರೆಯಾಗಿದ್ದರು. ಇದೀಗ ರಾಜೇಂದ್ರ ಅವರ ಮೃದೇಹ ಪತ್ತೆಯಾಗುವುದರೊಂದಿಗೆ ಮೃತರ ಸಂಖ್ಯೆ ಮೂಕಕ್ಕೇರಿದೆ.

ಘಟನೆಯಲ್ಲಿ  ಗಾಯಗೊಂಡಿರುವ  ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News