×
Ad

ಮೂಡಿಗೆರೆ: ಮರ ಬಿದ್ದು ಯುವಕ ಮೃತ್ಯು

Update: 2024-06-08 19:53 IST

ಚಿಕ್ಕಮಗಳೂರು: ಅಪ್ಪ ಕಡಿದ ಮರ ಮಗನ ಮೇಲೆ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗೋಡ್ಲು ಎಸ್ಟೇಟ್‍ನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಮೃತ ಯುವಕನನ್ನು ಕೇರಳ ಮೂಲದ ಅಬ್ದುಲ್ ಅಝೀಝ್‌ (20) ಎಂದು ಗುರುತಿಸಲಾಗಿದೆ. ಹೆಗ್ಗೋಡ್ಲು ಎಸ್ಟೇಟ್‍ನಲ್ಲಿ ಟಿಂಬರ್ ಮರಗಳನ್ನು ಕಡಿಯಲು ಅಬ್ದುಲ್ ಅಝೀಝ್‌ ತನ್ನ ತಂದೆಯೊಂದಿಗೆ ಕೇರಳದಿಂದ ಬಂದಿದ್ದ. ಕೆಲ ದಿನಗಳಿಂದ ಎಸ್ಟೇಟ್‍ನಲ್ಲೇ ಉಳಿದುಕೊಂಡಿದ್ದ ಅಪ್ಪ, ಮಗ ಮರಗಳನ್ನು ಕಡಿಯುವ ಕೆಲಸಲ್ಲಿ ನಿರತರಾಗಿದ್ದರು. ಶನಿವಾರ ಮಧ್ಯಾಹ್ನದ ವೇಳೆ ಅಪ್ಪ ಮರ ಕಡಿಯುತ್ತಿದ್ದಾಗ ಅಬ್ದುಲ್ ಅಝೀಝ್‌ ಸಮೀಪದಲ್ಲೇ ನಿಂತು ನೋಡುತ್ತಿದ್ದ. ಈ ವೇಳೆ ಅಪ್ಪ ಕಡಿದ ಮರ ಏಕಾಏಕಿ ಅಬ್ದುಲ್ ಅಝೀಝ್‌ನತ್ತಲೇ ತಿರುಗಿ ಬಿದ್ದಿದೆ. ಮರ ಅಝೀಝ್‌ನ ತಲೆಯ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.

ಮೃತದೇಹವನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News