×
Ad

ಬಿಜೆಪಿ, ಜೆಡಿಎಸ್ ನಿಂದ ರಾಜ್ಯ ಸರಕಾರ ಬೀಳಿಸುವ ಯತ್ನ: ಕೃಷ್ಣ ಬೈರೇಗೌಡ ಆರೋಪ

Update: 2024-08-05 14:16 IST

ಫೈಲ್ ಫೋಟೋ

ಚಿಕ್ಕಮಗಳೂರು: ಬಿಜೆಪಿ ಮತ್ತು ಜೆಡಿಎಸ್ ನವರು ಏನಾದರೂ ಮಾಡಿ ನಮ್ಮ ಸರಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.

ಸೋಮವಾರ ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಇದೆ. ಕುಮಾರಸ್ವಾಮಿ ಅವರು ಮಂತ್ರಿಯಾಗಿದ್ದಾರೆ ರಾಜ್ಯದ ಜನತೆ ನಿಮಗೆ ಅಧಿಕಾರ ನೀಡಿದ್ದು ದ್ವೇಷ ರಾಜಕಾರಣ ಮಾಡಲೋ ರಾಜ್ಯಕ್ಕೆ ಉಪಕಾರ ಮಾಡು ವುದಕ್ಕೋ ಎಂದು ಪ್ರಶ್ನಿಸಿದರು.

ಸರ್ಕಾರ ಬೀಳಿಸುವುದು, ಎತ್ತುವುದು ಜನ ಮಾಡುತ್ತಾರೆ. ಸರ್ಕಾರ ಬೀಳಿಸುವುದೇ ನಿಮ್ಮ ಸಾಧನೆಯೇ, ನಿಮ್ಮ ಸಾಧನೆ ಕೊಡುಗೆಗಳನ್ನು ಹೇಳಿ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಮುಚ್ಚಿಹಾಕಲು ಗಿಮಿಕ್ ನಾಟಕಗಳನ್ನು ಮಾಡುತ್ತಿದ್ದಾರೆ. ಮೇಕೆದಾಟು, ಭದ್ರಾ ಮೇಲ್ದಂಡೆ, ಯೋಜನೆ ಬರಬೇಕಾದ ಅನುದಾನ ಕೊಡಿಸುವ ಕೆಲಸ ಮಾಡಿ ಎಂದು ಒತ್ತಾಯಿಸಿದರು.

ಬಿಜೆಪಿ ಜೆಡಿಎಸ್ ಇಬ್ಬರು ಸೇರಿ ಜಾಯಿಂಟ್ ಆಪರೇಷನ್ ಮಾಡುತ್ತಿದ್ದಾರೆ. ಅದು ಸಕ್ಸಸ್, ಫೆಲ್ಯೂರ್ ನೋಡೋಣ, ಈ ಆಪರೇಷನ್ ಬಿಟ್ಟು ಕರ್ನಾಟಕ ಕ್ಕೆ ಪ್ರಯೋಜನವಾಗುವ ಕಲಸ ಮಾಡಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News