ಚಕ್ಕಮಕ್ಕಿ | ದಾರುಲ್ ಬಯಾನ್ ಸಂಸ್ಥೆಯ ಬೆಳ್ಳಿಹಬ್ಬ ಸಂಭ್ರಮ ಸಮಾರೋಪ ಸಮಾರಂಭ
ಮೂಡಿಗೆರೆ: ಚಕ್ಕಮಕ್ಕಿಯ ದಾರುಲ್ ಬಯಾನ್ ಖಲಂದರಿಯಾ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆ ಕಾರ್ಯಕ್ರಮ ಡಿ.8ರಂದು ನಡೆಯಿತು.
ಚುಂಗತರ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಸಿನಾನ್ ಫೈಝಿ ಮುನ್ನುಡಿ ಭಾಷಣ ಮಾಡಿದರು. ನವಾಝ್ ಮನ್ನಾನಿ ಪನವೂರು ಮುಖ್ಯ ಭಾಷಣ ಮಾಡಿದರು. ಮೊಯ್ದು ಫೈಝಿ ಕೊಡಗು ದುಆಗೈದರು. ಉಸ್ಮಾನ್ ಫೈಝಿ ತೋಡಾರ್, ಇರ್ಷಾದ್ ದಾರಿಮಿ ಸಲೀಂ ಅರ್ಷದಿ ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಝೆನಿತ್ ಅಬ್ದುಲ್ ನಾಸಿರ್ ಹಾಜಿ ಸಮಾರೋಪ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾಯದರ್ಶಿ ಝೈದ್ ಖಲಂದರಿ ಸ್ವಾಗತಿಸಿದರು.
ಬೆಳಗ್ಗೆ ನಡೆದ ಸೌಹಾರ್ದ ಸಂಗಮವನ್ನು ಸಿನಾನ್ ಫೈಝಿ ಉದ್ಘಾಟಿಸಿದರು. ಝೆನಿತ್ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು. ಅಡ್ವಕೇಟ್ ಪವಾಝ್, ಸಲೀಂ, ಬಣಕಲ್ ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ್, ಶಿವರಾಮ ಬಣಕಲ್ ಮಾತನಾಡಿದರು.
ಬಳಿಕ ನಡೆದ ಕುಟುಂಬ ಸಂಗಮ ಕಾರ್ಯಕ್ರಮದಲ್ಲಿ ಮೂಡಿಗೆರೆ ಖತೀಬ್ ಮುಸ್ತಫ ಯಮಾನಿ ಹಿತವಚನ ನೀಡಿದರು. ಸಂಜೆ ನಡೆದ ಮಜ್ಲಿಸುನ್ನೂರ್ ಕಾರ್ಯಕ್ರಮಕ್ಕೆ ಇರ್ಶಾದ್ ದಾರಿಮಿ ಮಿತ್ತಬೈಲ್ ನೇತೃತ್ವ ನೀಡಿದರು.