ಕಡೂರು | ಗ್ರಾಪಂ ಸದಸ್ಯನ ಹತ್ಯೆ ಪ್ರಕರಣ : ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ 6 ಆರೋಪಿಗಳ ಬಂಧನ
Update: 2025-12-11 13:42 IST
ಗಣೇಶ್ ಗೌಡ
ಚಿಕ್ಕಮಗಳೂರು : ಸಖರಾಯಪಟ್ಟಣದಲ್ಲಿ ಡಿ.5ರ ರಾತ್ರಿ ನಡೆದ ಕಾಂಗ್ರೆಸ್ ಗ್ರಾ.ಪಂ. ಸದಸ್ಯ ಗಣೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಮಧುರೈ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಎ2 ಆರೋಪಿ ನಿತಿನ್, ಎ4 ಆರೋಪಿ ದರ್ಶನ್, ಎ5 ಆರೋಪಿ ಅಜಯ್, ದರ್ಶನ್ ನಾಯ್ಕ್, ಯೋಗೇಶ್ ಮತ್ತು ಫೈಸಲ್ ನನ್ನು ವಿಶೇಷ ತಂಡ ಡಿ.11 ಬಂಧಿಸಿದೆ.
ಪ್ರಕರಣದ ತನಿಖೆಗೆ ಸಖರಾಯಪಟ್ಟಣ ಪೊಲೀಸರು ನಾಲ್ಕು ಸದಸ್ಯರ ವಿಶೇಷ ತಂಡವನ್ನು ರಚಿಸಿದ್ದರು. ಈವರೆಗೆ ಗಣೇಶ್ ಕೊಲೆ ಪ್ರಕರಣದಲ್ಲಿ ಒಟ್ಟು 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರಾದ 6 ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.