ಚಿಕ್ಕಮಗಳೂರು | ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಮೃತ್ಯು
Update: 2025-03-11 15:39 IST
ಸಂಪತ್
ಚಿಕ್ಕಮಗಳೂರು : ತೋಟದಲ್ಲಿ ಅಲ್ಯೂಮಿನಿಯಂ ಏಣಿ ತರುತ್ತಿದ್ದ ವೇಳೆ ವಿದ್ಯುತ್ ತಂತಿಗೆ ಏಣಿ ತಗುಲಿ ಯುವಕ ಮೃತಪಟ್ಟಿರುವ ಘಟನೆ ಎನ್.ಆರ್.ಪುರ ತಾಲೂಕಿನ ತೊಪ್ಪುರು ಗ್ರಾಮದಲ್ಲಿ ನಡೆದಿದೆ.
ಸಂಪತ್ (28) ಮೃತ ಯುವಕ ಎಂದು ತಿಳಿದುಬಂದಿದೆ.
ತೋಟದ ಕೆಲಸದ ವೇಳೆ ಅಲ್ಯೂಮಿನಿಯಂ ಏಣಿಯನ್ನು ತರುತ್ತಿದ್ದ ವೇಳೆ, ಏಣಿ ವಿದ್ಯುತ್ ತಂತಿಗೆ ತಗುಲಿ ತೀವ್ರ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಲೆನಾಡ ಪ್ರದೇಶದಲ್ಲಿ ಇಂತಹ ಘಟನೆಗಳು ಪದೇ ಪದೇ ಸಂಭವಿಸುತ್ತಲೇ ಇದ್ದರೂ, ಅಲ್ಯೂಮಿನಿಯಂ ಏಣಿಗಳ ನಿಷೇದ ಮಾತ್ರ ಇನ್ನು ಸಾಧ್ಯವಾಗಿಲ್ಲ