×
Ad

ಚಿಕ್ಕಮಗಳೂರಿನ ಗಝಾಲ ಹಫೀಜ್ ಗೆ ಬಿ.ಇಡಿಯಲ್ಲಿ ಪ್ರಥಮ ರ‍್ಯಾಂಕ್; ರಾಜ್ಯಪಾಲರಿಂದ ಪದವಿ ಸ್ವೀಕಾರ

Update: 2023-07-26 16:03 IST

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದ 33ನೇ ವರ್ಷದ ಘಟಿಕೋತ್ಸದಲ್ಲಿ ಬಿ.ಇಡಿ ವಿದ್ಯಾರ್ಥಿನಿ ಗಜಾಲ ಹಫೀಜ್ ಪ್ರಥಮ ರ‍್ಯಾಂಕ್ ಪಡೆದು ಮೂರು ಚಿನ್ನದ ಪದಕ ಮತ್ತು ನಗದು ಬಹುಮಾನ ಪಡೆದುಕೊಂಡಿದ್ದಾರೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗಜಾಲ ಹಫೀಜ್ ಅವರಿಗೆ ಪದವಿ ಪ್ರದಾನ ಮಾಡಿದರು. ಇವರು ಚಿಕ್ಕಮಗಳೂರಿನ M.L.M.N ಕಾಲೇಜಿನ 2022-23 ನೇ ಸಾಲಿನ ವಿದ್ಯಾರ್ಥಿಯಾಗಿದ್ದಾರೆ.

ಮೂಲತಃ ಚಿಕ್ಕಮಗಳೂರಿನವರಾದ ಗಜಾಲ ಹಫೀಜ್ ಅವರು ಜಾನುವಾರು ಅಭಿವೃದ್ಧಿ ಅಧಿಕಾರಿ ಕೆ. ಅಜೀಜ್ ಅಹಮದ್ ಖಾನ್ ಅವರ ಪುತ್ರಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News