ಕೊಪ್ಪ | ಉದ್ಯಮಿ ಖಾಜಾ ಮೊಹಿಯುದ್ದೀನ್ ಮದ್ದಾಸ್ ನಿಧನ
Update: 2026-07-13 14:03 IST
ಕೊಪ್ಪ, ಜು.13: ಪಟ್ಟಣದ ಖ್ಯಾತ ಉದ್ಯಮಿ ಖಾಜಾ ಮೊಹಿಯುದ್ದೀನ್ (68) ಅವರು ಸೋಮವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮದ್ದಾಸ್ ಪ್ಯಾಮಿಲಿಯವರಾದ ಖಾಜಾ ಅವರು ಸೋಮವಾರ ಬೆಂಗಳೂರಿನ ತಮ್ಮ ಮನೆಯಲ್ಲಿದ್ದ ವೇಳೆ ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಖಾಜಾ ಮೊಹಿಯುದ್ದೀನ್ ಅವರು ಕೊಪ್ಪ ಪಟ್ಟಣದ ಹೆಸರಾಂತ ಉದ್ಯಮಿಯಾಗಿದ್ದು, ಇತ್ತೀಚೆಗೆ ಕೃಷಿಯಲ್ಲಿ ಅವರು ತೊಡಗಿದ್ದರು. ಸೋಮವಾರ ಹಠಾತ್ ಕಾಣಿಸಿಕೊಂಡ ಅನಾರೋಗ್ಯದಿಂದ ಅವರು ನಿಧನರಾಗಿದ್ದಾರೆ. ಖಾಜಾ ಮೊಹಿಯುದ್ದೀನ್ ಅವರ ನಿಧನಕ್ಕೆ ಕೊಪ್ಪ ಪಟ್ಟಣ ಜನತೆ ಕಂಬನಿ ಮಿಡಿದಿದ್ದು, ಅವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.