×
Ad

ಕೊಟ್ಟಿಗೆಹಾರ | ಬಸ್ ಮೇಲೆ ಉರುಳಿ ಬಿದ್ದ ಮರ: ತಪ್ಪಿದ ಭಾರೀ ಅನಾಹುತ

Update: 2025-05-20 14:29 IST

ಕೊಟ್ಟಿಗೆಹಾರ : ಭಾರೀ ಗಾಳಿ ಮಳೆಗೆ ದೊಡ್ಡ ಮರವೊಂದು ಖಾಸಗಿ ಬಸ್‌ ಮೇಲೆ ಬಿದ್ದ ಘಟನೆ ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದಲ್ಲಿ ನಡೆದಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಂಕಸಾಲೆಯ ರಾಣಿಜೇರಿ ಕಾಫಿ ಶಾಪ್ ಎದುರು ಘಟನೆ ಸಂಭವಿಸಿದೆ.

ಈ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News