ಶೃಂಗೇರಿ: ಹುಲಗಾರುಬೈಲು ಕಾಡಿನಲ್ಲಿ ನಾಡ ಬಂದೂಕು ಪತ್ತೆ
Update: 2025-02-06 13:59 IST
ಚಿಕ್ಕಮಗಳೂರು: ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಗಾರುಬೈಲು ಅರಣ್ಯದಲ್ಲಿ ಬಂದೂಕೊಂದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಹುಲಗಾರುಬೈಲು ಅರಣ್ಯದ ನಡುವೆ ಒಂದು ನಾಡ ಬಂದೂಕು, 18 ಖಾಲಿ ಕಾಟ್ರೇಜ್ ಪತ್ತೆಯಾಗಿದೆ. ಬಂದೂಕನ್ನು ಕಾಡಿನಲ್ಲಿ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶೃಂಗೇರಿ ಪೊಲೀಸರು ನಾಡ ಬಂದೂಕು ಸೇರಿದಂತೆ 18 ಖಾಲಿ ಕಾಟ್ರೇಜ್ ವಶಕ್ಕೆ ಪಡೆದಿದ್ದಾರೆ.