×
Ad

ನಿರೀಕ್ಷೆ ಹೊತ್ತು ಬರುತ್ತಿರುವ ‘ದೃಶ್ಯಂ- 3’; ಚರ್ಚೆಯಾಗುತ್ತಿರುವ ಹೊಸ ಟ್ರೇಲರ್

Update: 2026-05-20 18:26 IST

Drishyam 3  - IMDb

ಇತ್ತೀಚೆಗೆ ಬಿಡುಗಡೆಯಾದ ‘ದೃಶ್ಯಂ 3’ ಸಿನಿಮಾದ ಟ್ರೇಲರ್‌ ನಲ್ಲಿ ಜಾರ್ಜ್‌ ಕುಟ್ಟಿ ಕುಟುಂಬದ ಉಳಿವಿಗಾಗಿ ನಡೆಯುತ್ತಿರುವ ಹೋರಾಟ ಮುಂದುವರಿದಿರುವ ಸಾಧ್ಯತೆಯನ್ನು ತೋರಿಸಲಾಗಿದೆ.

‘ದೃಶ್ಯಂ’ ರೀತಿಯ ಕೆಲವು ಭಾರತೀಯ ಚಲನಚಿತ್ರ ಫ್ರಾಂಚೈಸಿಗಳು ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಇದೀಗ ‘ದೃಶ್ಯಂ 3’ ಅಪಾರ ನಿರೀಕ್ಷೆಗಳೊಂದಿಗೆ ಬರುತ್ತಿದೆ. ‘ದೃಶ್ಯಂ’ನ ಮೊದಲ ಚಿತ್ರ ಮಲಯಾಳಂ ಥ್ರಿಲ್ಲರ್‌ ಗಳನ್ನು ಮರು ವ್ಯಾಖ್ಯಾನಿಸಿತ್ತು ಮತ್ತು ಜಾರ್ಜ್‌ ಕುಟ್ಟಿ (ಮೋಹನ್‌ ಲಾಲ್ ಪಾತ್ರ) ಭಾರತೀಯ ಚಿತ್ರರಂಗದ ಅತ್ಯಂತ ಸ್ಮರಣೀಯ ಪಾತ್ರಗಳಲ್ಲಿ ಒಂದಾಗಿದೆ.

Full View

ಮೋಹನ್‌ ಲಾಲ್ ನಟಿಸಿರುವ ‘ದೃಶ್ಯಂ’ನ ಮೂರನೇ ಕಂತು ಮೇ 21ರಂದು ಬಹುಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಮಾತ್ರವಲ್ಲದೆ, ಇದು ಮಲಯಾಳಂ ಸಿನಿಮಾದ ಅತಿ ದೊಡ್ಡ ಚಿತ್ರಗಳಲ್ಲಿ ಒಂದಾಗುವ ನಿರೀಕ್ಷೆಯೂ ಇದೆ. ಆದರೆ ಇತ್ತೀಚೆಗೆ ಬಿಡುಗಡೆಯಾದ ‘ಪೇಟ್ರಿಯಾಟ್’ನಂತೆ ಕೆಲವು ಮಲಯಾಳಂ ಸಿನಿಮಾಗಳು ನಿರೀಕ್ಷೆಗೆ ತಕ್ಕ ಪ್ರದರ್ಶನ ಕಾಣದಿರುವ ಆತಂಕವೂ ಹರಡಿದೆ.

‘ದೃಶ್ಯಂ’ ಸರಣಿ ಸಿನಿಮಾಗಳು ಜಾರ್ಜ್‌ ಕುಟ್ಟಿ ಮತ್ತು ಅವರ ಕುಟುಂಬದ ಕಥೆಯನ್ನು ಅನುಸರಿಸುತ್ತವೆ. ಅನಿರೀಕ್ಷಿತವಾಗಿ ನಡೆದ ಅಪರಾಧದ ಬಳಿಕ ಬದುಕುಳಿಯುವ ಹೋರಾಟದ ನಡುವೆ ಅವರ ಜೀವನ ಸಮಸ್ಯೆಗಳ ಗೂಡಾಗುತ್ತದೆ. ಪೊಲೀಸ್ ತನಿಖೆಯಿಂದ ತಮ್ಮ ಕುಟುಂಬವನ್ನು ರಕ್ಷಿಸಲು ಜಾರ್ಜ್‌ ಕುಟ್ಟಿ ತಮ್ಮ ಚತುರ ಬುದ್ಧಿಯನ್ನು ಬಳಸಿಕೊಳ್ಳುತ್ತಾರೆ. ‘ದೃಶ್ಯಂ 2’ನಲ್ಲಿ ಅಪರಾಧವನ್ನು ಹುದುಗಿಸಿಟ್ಟ ವರ್ಷಗಳ ಬಳಿಕ ನಿಧಾನವಾಗಿ ರಹಸ್ಯಗಳು ಹೊರಬರುವ ಸಂದರ್ಭದ ಪೊಲೀಸ್ ತನಿಖೆಯನ್ನು ಚಿತ್ರಿಸಲಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ‘ದೃಶ್ಯಂ 3’ ಸಿನಿಮಾದ ಟ್ರೇಲರ್‌ನಲ್ಲಿ ಜಾರ್ಜ್‌ ಕುಟ್ಟಿ ಕುಟುಂಬದ ಉಳಿವಿಗಾಗಿ ನಡೆಯುತ್ತಿರುವ ಹೋರಾಟ ಮುಂದುವರಿದಿರುವ ಸಾಧ್ಯತೆಯನ್ನು ತೋರಿಸಲಾಗಿದೆ. ಈ ಬಾರಿ ಜಾರ್ಜ್‌ ಕುಟ್ಟಿ ತಮ್ಮೊಳಗೇ ಸಂಘರ್ಷ ಎದುರಿಸುತ್ತಿರುವ ಸೂಚನೆಗಳು ಕಂಡುಬರುತ್ತವೆ. ಟ್ರೇಲರ್‌ ನ ದೃಶ್ಯಗಳು ಅಪರಾಧಿ ಭಾವನೆ ಅಂತಿಮವಾಗಿ ಜಾರ್ಜ್‌ಕುಟ್ಟಿಯ ಆತ್ಮಸಾಕ್ಷಿಯ ಮೇಲೆ ಪ್ರಭಾವ ಬೀರುತ್ತಿರುವುದನ್ನು ಸೂಚಿಸುತ್ತವೆ. ಹೀಗಾಗಿ ಈ ಅಂತಿಮ ಕಂತು ಹೆಚ್ಚು ಭಾವನಾತ್ಮಕವಾಗಿರುವ ಸಾಧ್ಯತೆಯಿದೆ.

ಸಿನಿಮಾದಲ್ಲಿ ಮೀನಾ, ಅನ್ಸಿಬಾ ಹಸನ್ ಮತ್ತು ಎಸ್ತರ್ ಅನಿಲ್ ಮೊದಲಾದವರು ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಸಿದ್ದಿಕ್, ಆಶಾ ಶರತ್ ಮತ್ತು ಮುರಳಿ ಗೋಪಿ ಕಾಣಿಸಿಕೊಂಡಿದ್ದಾರೆ.

ಜಾರ್ಜ್‌ ಕುಟ್ಟಿಯ ಕಥೆಯನ್ನು ಮುಕ್ತಾಯಗೊಳಿಸುವುದರ ಹೊರತಾಗಿ, ಈ ಸಿನಿಮಾ ಫ್ರಾಂಚೈಸಿ ಮೌಲ್ಯ, ತಾರಾ ಮೌಲ್ಯ ಮತ್ತು ಮಲಯಾಳಂ ಸಿನಿಮಾದ ಮೇಲಿನ ರಾಷ್ಟ್ರವ್ಯಾಪಿ ನಿರೀಕ್ಷೆಯನ್ನು ಪ್ರತಿಬಿಂಬಿಸುತ್ತದೆ. ‘ದೃಶ್ಯಂ 3’ ಬಹಳ ನಿರೀಕ್ಷೆಯನ್ನು ಹೊತ್ತು ಬರುತ್ತಿದ್ದು, ಬಿಡುಗಡೆಗೂ ಮುನ್ನವೇ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ.

ಸಿನಿಮಾದ ಘೋಷಣೆಯಾದಂದಿನಿಂದ ಮಲಯಾಳಂ ಮಾತ್ರವಲ್ಲದೆ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರರಂಗಗಳಲ್ಲಿಯೂ ನಿರೀಕ್ಷೆಗಳು ಹೆಚ್ಚಾಗಿವೆ. ಹೀಗಾಗಿ ಫ್ರಾಂಚೈಸಿಯ ವ್ಯಾಪ್ತಿ ಅದರ ಮೂಲ ಭಾಷೆಯನ್ನು ಮೀರಿ ಉದ್ಯಮದಾದ್ಯಂತ ಬೆಳೆದಿದೆ. ಈ ಸಿನಿಮಾದ ಯಶಸ್ಸು ಮಲಯಾಳಂ ಸಿನಿಮಾ ದೊಡ್ಡ ನಿರ್ಮಾಣ ಸಂಸ್ಥೆಗಳ ವಿರುದ್ಧವೂ ಸ್ಪರ್ಧಿಸುವ ಸಾಮರ್ಥ್ಯ ಹೊಂದಿರುವುದಕ್ಕೆ ಸಾಕ್ಷಿಯಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News