ಅವೆಂಜರ್ಸ್: ಡೂಮ್ಸ್ಡೇ ಟ್ರೇಲರ್ ಬಿಡುಗಡೆ; ಒಂದೇ ವೇದಿಕೆಯಲ್ಲಿ ಮಹಾ ಸಂಗಮ!
Photo: PTI
ಫ್ರಾಂಚೈಸಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಅವೆಂಜರ್ಸ್, ದಿ ಫೆಂಟಾಸ್ಟಿಕ್ ಫೋರ್ ಮತ್ತು ಎಕ್ಸ್-ಮೆನ್ ಅನ್ನು ಒಂದೇ ಚಿತ್ರದಲ್ಲಿ ಒಟ್ಟುಗೂಡಿಸುತ್ತದೆ.
ಹಾಲಿವುಡ್ನ ಪ್ರಸಿದ್ಧ ಸಿನಿಮಾ ನಿರ್ಮಾಣ ಸಂಸ್ಥೆಯಾದ ಮಾರ್ವೆಲ್ ಸ್ಟುಡಿಯೋಸ್ ಸೋಮವಾರ ತನ್ನ ಬಹು ನಿರೀಕ್ಷಿತ ‘ಅವೆಂಜರ್ಸ್: ಡೂಮ್ಸ್ಡೇ’ ಚಿತ್ರದ ಅಂತಿಮ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಮಾರ್ವೆಲ್ ಸಿನಿಮಾಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತ್ಯಂತ ಜನಪ್ರಿಯ ಸೂಪರ್ ಹೀರೋ ತಂಡಗಳಾದ ಅವೆಂಜರ್ಸ್, ಫೆಂಟಾಸ್ಟಿಕ್ ಫೋರ್ ಮತ್ತು ಎಕ್ಸ್-ಮೆನ್ ಒಂದೇ ಕತೆಯಲ್ಲಿ ಐತಿಹಾಸಿಕ ಸಂಗಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಈ ಮೂರು ತಂಡಗಳ ಸಿನಿಮಾಗಳು ಬೇರೆ-ಬೇರೆಯಾಗಿ ಬರುತ್ತಿದ್ದವು. ಈಗ ಅವರೆಲ್ಲರೂ ಒಂದೇ ಸಿನಿಮಾದಲ್ಲಿ ಜೊತೆಯಾಗಿ ಬರುತ್ತಿರುವುದು ಅಭಿಮಾನಿಗಳಿಗೆ ದೊಡ್ಡ ಹಬ್ಬದಂತಾಗಿದೆ.
ಬಿಡುಗಡೆಯಾದ ಟ್ರೇಲರ್ ಸಿನಿಮಾದ ಬೃಹತ್ ವ್ಯಾಪ್ತಿಯ ಬಗ್ಗೆ ಮತ್ತು ಎಷ್ಟು ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಿದೆ ಎಂಬುದರ ಸ್ಪಷ್ಟ ಚಿತ್ರಣವನ್ನು ಅಭಿಮಾನಿಗಳಿಗೆ ನೀಡಿದೆ. 2024ರ ಜುಲೈನಲ್ಲಿ ನಡೆದ ‘ಸ್ಯಾನ್ ಡಿಯಾಗೋ ಕಾಮಿಕ್-ಕಾನ್’ ಕಾರ್ಯಕ್ರಮದಲ್ಲಿ ನಟ ರಾಬರ್ಟ್ ಡೌನಿ ಜ್ಯೂನಿಯರ್ ಅವರು ಮಾರ್ವೆಲ್ ಸಿನಿಮಾಗೆ ಮರಳುತ್ತಿದ್ದಾರೆ ಎಂಬ ಅಚ್ಚರಿಯ ಸುದ್ದಿಯನ್ನು ಘೋಷಿಸಲಾಗಿತ್ತು. ಅಂದಿನಿಂದ ಅಭಿಮಾನಿಗಳಲ್ಲಿದ್ದ ಎಲ್ಲಾ ಊಹಾಪೋಹ ಮತ್ತು ನಿರೀಕ್ಷೆಗಳನ್ನು ಈ ಟ್ರೇಲರ್ ಈಗ ಖಚಿತಪಡಿಸಿದೆ.
ರಾಬರ್ಟ್ ಡೌನಿ ಜ್ಯೂನಿಯರ್ ಅವರು ಸುಮಾರು 10 ವರ್ಷಗಳಿಗೂ ಹೆಚ್ಚು ಕಾಲ ‘ಟೋನಿ ಸ್ಟಾರ್ಕ್/ ಐರನ್ ಮ್ಯಾನ್’ ಎಂಬ ನಾಯಕನ ಪಾತ್ರದಲ್ಲಿ ಮಿಂಚಿದ್ದರು. 2019ರ ‘ಎಂಡ್ಗೇಮ್’ ಸಿನಿಮಾದಲ್ಲಿ ಜಗತ್ತನ್ನು ಉಳಿಸಲು ಅವರ ಪಾತ್ರ ಸಾವನ್ನಪ್ಪಿತ್ತು. ಆದರೆ ಈಗ, ಅದೇ ನಟ ವಿಕ್ಟರ್ ವಾನ್ ಡೂಮ್ ಎಂಬ ಅತ್ಯಂತ ಶಕ್ತಿಶಾಲಿ, ಮುಖವಾಡ ಧರಿಸಿದ ವಿಲನ್ ಪಾತ್ರದಲ್ಲಿ ಮತ್ತೆ ಮಾರ್ವೆಲ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇಡೀ ಸಿನಿಮಾದ ಕತೆ ಮತ್ತು ಯುದ್ಧ ಇವರ ಸುತ್ತಲೇ ಸಾಗುತ್ತದೆ.
‘ಮಾರ್ವೆಲ್’ ಸಿನಿಮಾಗಾಗಿ ಒಟ್ಟುಗೂಡಿದ ಅತಿದೊಡ್ಡ ತಾರಾಗಣ ಇದಾಗಿದೆ. ಕ್ರಿಸ್ ಇವಾನ್ಸ್ ‘ಸ್ಟೀವ್ ರೋಜರ್ಸ್’ ಆಗಿ ಮರಳಿದರೆ, ಕ್ರಿಸ್ ಹೆಮ್ಸ್‌ವರ್ತ್ ‘ಥಾರ್’ ಪಾತ್ರವನ್ನು ಪುನರಾವರ್ತಿಸುತ್ತಾನೆ. ಆಂಥೋನಿ ಮ್ಯಾಕಿ ‘ಸ್ಯಾಮ್ ವಿಲ್ಸನ್’ ಪಾತ್ರದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ‘ಬಕಿ ಬಾರ್ನ್ಸ್’ ಆಗಿ ಸೆಬಾಸ್ಟಿಯನ್ ಸ್ಟಾನ್, ‘ಸ್ಕಾಟ್ ಲ್ಯಾಂಗ್’ ಆಗಿ ಪಾಲ್ ರುಡ್, ‘ಶೂರಿ’ಯಾಗಿ ಲೆಟಿಟಿಯಾ ರೈಟ್ ಮತ್ತು ‘ಲೋಕಿ’ಯಾಗಿ ಟಾಮ್ ಹಿಡಲ್‌ಸ್ಟನ್ ನಟಿಸಿದ್ದಾರೆ.
ಈ ಟ್ರೇಲರ್ ಹಳೆಯ ಎಕ್ಸ್-ಮೆನ್ ತಂಡವು ಮಾರ್ವೆಲ್ ಸಿನಿಮ್ಯಾಟಿಕ್ ಯುನಿವರ್ಸ್ನ ಮುಖ್ಯ ಅವೆಂಜರ್ಸ್ ಕಥಾಹಂದರವನ್ನು ಸೇರುತ್ತಿರುವುದರ ಸ್ಪಷ್ಟ ನೋಟವನ್ನೂ ನೀಡುತ್ತದೆ. ಇದರಲ್ಲಿ ಪ್ಯಾಟ್ರಿಕ್ ಸ್ಟೀವರ್ಟ್ ಅವರು ‘ಪ್ರೊಫೆಸರ್ ಚಾರ್ಲ್ಸ್ ಕ್ಸೇವಿಯರ್’ ಆಗಿ ಇಯಾನ್ ಮೆಕೆಲೆನ್ ‘ಮ್ಯಾಗ್ನೆಟೋ’ ಆಗಿ, ಜೇಮ್ಸ್ ಮಾರ್ಸ್‌ಡೆನ್ ‘ಸೈಕ್ಲೋಪ್ಸ್’ ಆಗಿ, ರೆಬೆಕ್ಕಾ ರೊಮಿನ್ ‘ಮಿಸ್ಟಿಕ್’ ಆಗಿ ಮತ್ತು ಅಲನ್ ಕಮ್ಮಿಂಗ್ ‘ನೈಟ್‌ಕ್ರಾಲರ್’ ಆಗಿ ಮರಳಿದ್ದಾರೆ. 2024ರಲ್ಲಿ ಬಂದ ‘ಡೆಡ್ಪೂಲ್ & ವೊಲ್ವೆರಿನ್’ ಚಿತ್ರವು ಎಕ್ಸ್-ಮೆನ್ ಪಾತ್ರಗಳನ್ನು MCU ಪರಿಚಯಿಸಿತ್ತಾದರೂ ‘ಅವೆಂಜರ್ಸ್: ಡೂಮ್ಸ್ಡೇ’ ಚಿತ್ರವು ಹಳೆಯ ಫಾಕ್ಸ್ ಕಾಲದ ಎಕ್ಸ್-ಮೆನ್ ತಂಡವು ಅವೆಂಜರ್ಸ್ ಮತ್ತು ಫೆಂಟಾಸ್ಟಿಕ್ ಫೋರ್ ಜೊತೆಗೆ ಮೊದಲ ಬಾರಿಗೆ ಒಂದೇ ಪರದೆಯನ್ನು ಹಂಚಿಕೊಳ್ಳುತ್ತಿರುವುದನ್ನು ಗುರುತಿಸುತ್ತದೆ.
ಟ್ರೇಲರ್ನಲ್ಲಿ ಯೆಲೆನಾ ಬೆಲೋವಾ ಪಾತ್ರದಲ್ಲಿ ಫ್ಲಾರೆನ್ಸ್ ಪಗ್, ಶಾಂಗ್-ಚಿ ಪಾತ್ರದಲ್ಲಿ ಸಿಮು ಲಿಯು, ಡೇವಿಡ್ ಹಾರ್ಬರ್, ವ್ಯಾಟ್ ರಸೆಲ್, ಚಾನಿಂಗ್ ಟಾಟಮ್, ಡ್ಯಾನಿ ರಾಮಿರೆಜ್, ವಿನ್ಸ್ಟನ್ ಡ್ಯೂಕ್, ಹನ್ನಾ ಜಾನ್-ಕಾಮೆನ್, ಕೆಲ್ಸಿ ಗ್ರಾಮರ್, ಲೂಯಿಸ್ ಪುಲ್‌ಮನ್, ಟೆನೋಚ್ ಹುಯೆರ್ಟಾ ಮೆಜಿಯಾ, ಕ್ಯಾಥರಿನ್ ನ್ಯೂಟನ್ ಮತ್ತು ಮಾಬೆಲ್ ಕ್ಯಾಡೆನಾ ಇತರರು ಇದ್ದಾರೆ.
ಅಂತಿಮ ಟ್ರೇಲರ್ನಲ್ಲಿ ಬಹಿರಂಗಗೊಂಡಿರುವ ಪ್ರಮುಖ ವಿವರವೆಂದರೆ ಕ್ರಿಸ್ ಇವಾನ್ಸ್ನ ಸ್ಟೀವ್ ರೋಜರ್ಸ್ ಮತ್ತು ಹೇಲಿ ಅಟ್ವೆಲ್ನ ಪೆಗ್ಗಿ ಕಾರ್ಟರ್ ಪಾತ್ರವು ‘ಅರ್ಥ್-282’ ಎಂದು ಸಿನಿಮಾವು ಗುರುತಿಸುವ ಒಂದರ ಮೇಲೆ ಒಟ್ಟಿಗೆ ಜೀವನವನ್ನು ನಿರ್ಮಿಸಿಕೊಂಡಿದ್ದಾರೆ. ಫೆಂಟಾಸ್ಟಿಕ್ ಫೋರ್ನಂತೆಯೇ ಅದೇ ವಿಶ್ವವಾಗಿದೆ. ವೆಸ್ಲಿ ಹಾಲೋವೇ ನಿರ್ವಹಿಸಿದ ಅವರ ಮಗನ ಪಾತ್ರ ಕೂಡ ಈ ಟ್ರೇಲರ್ನಲ್ಲಿ ಕಾಣಿಸಿಕೊಳ್ಳುತ್ತಾನೆ.
ಈ ಸಿನಿಮಾವು ಡಿಸೆಂಬರ್ 17ರಂದು ಭಾರತದಲ್ಲಿ ಮತ್ತು ಡಿಸೆಂಬರ್ 18ರಂದು ಅಮೆರಿಕದಲ್ಲಿ ಬಿಡುಗಡೆಯಾಗುತ್ತಿದೆ.