ಕೋಲ್ಪೆ ಜಮಾಅತ್ ವತಿಯಿಂದ ಮಸೀದಿಯ ಖತೀಬ್‌ಗೆ ಕಾರು ಉಡುಗೊರೆ
ಕಡಬ : ನೆಲ್ಯಾಡಿ ಬಳಿಯ ಕೋಲ್ಪೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇಸಾಕ್ ಫೈಝಿ ಅವರಿಗೆ ಜಮಾಅತ್ ವತಿಯಿಂದ ಮಾರುತಿ ವ್ಯಾಗನರ್ ಕಾರು ಉಡುಗೊರೆಯಾಗಿ ನೀಡಲಾಯಿತು.
SKSSF ಮಾಜಿ ಜಿಲ್ಲಾಧ್ಯಕ್ಷ ಇಸಾಕ್ ಫೈಝಿ ಒಂದೂವರೆ ವರ್ಷದಿಂದ ಕೋಲ್ಪೆ ಮಸೀದಿಯಲ್ಲಿ ಖತೀಬ್ ಆಗಿ ಕರ್ತವ್ಯ ನಿರ್ವಹಿಸಿದ್ದು ಅವರ ಮಾದರಿ ಸೇವೆಗೆ ಜಮಾಅತ್ ವತಿಯಿಂದ ಎಂಟೂವರೆ ಲಕ್ಷ ರೂ. ಮೌಲ್ಯದ ವ್ಯಾಗನರ್ ಕಾರನ್ನು ಗಿಫ್ಟ್ ನೀಡಿದ್ದಾರೆ. ಉಪ್ಪಿನಂಗಡಿಯ ಮಾರುತಿ ಷೋ ರೂಂ ನಿಂದ ಹೊಸ ಕಾರನ್ನು ಇಸಾಕ್ ಫೈಝಿ ಪಡೆದುಕೊಂಡಿದ್ದಾರೆ.
ಇಸಾಕ್ ಫೈಝಿ ಕೋಲ್ಪೆ ಮಸೀದಿಯಲ್ಲಿ ಖತೀಬರಾಗಿ, ಸಮುದಾಯದ ಸಬಲೀಕರಣಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಧಾರ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿ ಮೂಡಿಸಿ ನಾಡಿನ ಏಳಿಗಾಗಿ ಶ್ರಮಿಸುತ್ತಿದ್ದಾರೆ. ಶುಕ್ರವಾರ ಜುಮಾ ಬಳಿಕ ಅವರು ನೀಡುವ ಪ್ರವಚನಗಳು ಒಳಿತಿನ ಕಡೆಗೆ ಸಾಗಲು ಮತ್ತು ಹೊಣೆಗಾರಿಕೆಯಿಂದ ಜೀವಿಸಲು ಪ್ರೇರಣೆ ನೀಡುತ್ತಿದೆ. ಜಮಾಅತ್‌ನಲ್ಲಿ ಮಾದರಿ ಸೇವೆ ನೀಡುತ್ತಿರುವ ಖತೀಬ್‌ರಿಗೆ ಉಡುಗೊರೆಯಾಗಿ ಹೊಸ ಕಾರು ನೀಡಿರುವುದಾಗಿ ಕೋಲ್ಪೆ ಜಮಾಅತ್ ಮಸೀದಿ ಆಡಳಿತ ಸಮಿತಿ ಸದಸ್ಯ ಕೆ.ಕೆ ಇಸ್ಮಾಯಿಲ್ ಕೋಲ್ಪೆ ತಿಳಿಸಿದರು. ಕಾರು ಜೊತೆಗೆ ಹೊಸ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿರುವುದಾಗಿ ಅವರು ತಿಳಿಸಿದರು.