ಬುರುಡೆ ಪ್ರಕರಣ | ದೂರುದಾರ ಚಿನ್ನಯ್ಯ ಬೆಳ್ತಂಗಡಿ ಕೋರ್ಟ್‌ಗೆ ಹಾಜರು
Update: 2025-09-18 15:23 IST
ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಚಿನ್ನಯ್ಯ ಸದ್ಯ ಶಿವಮೊಗ್ಗ ಜೈಲಿನಲ್ಲಿ ಸೆ.6ರಿಂದ ನ್ಯಾಯಾಂಗ ಬಂಧನಲ್ಲಿದ್ದು, ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆತರಲಾಗಿದೆ. ಚಿನ್ನಯ್ಯನ ಹೇಳಿಕೆಯನ್ನು ಬೆಳ್ತಂಗಡಿ ಕೋರ್ಟ್ ನಲ್ಲಿ ಇಂದು(ಸೆ.18) ಮತ್ತೆ ದಾಖಲಿಸಲಾಗುತ್ತದೆ.
ಬೆಳ್ತಂಗಡಿ ನ್ಯಾಯಾಲಯದ ಆದೇಶದಂತೆ ಸೆ.18ರಂದು ಶಿವಮೊಗ್ಗ ಜೈಲಿನಿಂದ ಆರೋಪಿ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಪೊಲೀಸರು ಮಧ್ಯಾಹ್ನ ಕರೆದುಕೊಂಡು ಬಂದಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ಈಗಾಗಲೇ ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯ ನ್ಯಾಯಾಧೀಶರ ಮುಂದೆ ಎರಡು ಹೇಳಿಕೆಗಳನ್ನು ದಾಖಲಿಸಿದ್ದು, ಇಂದು ಮತ್ತೊಂದು ಹೇಳಿಕೆಯನ್ನು ದಾಖಲಿಸಲಿರುವುದಾಗಿ ತಿಳಿದು ಬಂದಿದೆ.