ಉಳ್ಳಾಲ: ʼವುಶುʼ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರಂಶೀನಗೆ ಸನ್ಮಾನ
Update: 2025-10-29 23:18 IST
ಉಳ್ಳಾಲ: ಮೈಸೂರಿನಲ್ಲಿ ಜರುಗಿದ ರಾಜ್ಯಮಟ್ಟದ ದಸರಾ ಕ್ರೀಡಾ ಕೂಟ 2025 ರ 'ವುಶು' ಸ್ಪರ್ಧೆಯಲ್ಲಿ ಭಾಗವಹಿಸಿ 60 ಕೆ.ಜಿ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಉರುಮಣೆಯ ಕುಮಾರಿ ರಂಶಿನಾ ಅವರಿಗೆ ಹ್ಯೂಮಾನಿಟಿ ಫೌಂಡೇಶನ್ ಮಂಗಳೂರು ವತಿಯಿಂದ ಸನ್ಮಾನಿಸಲಾಯಿತು.
ಹ್ಯುಮಾನಿಟಿ ಫೌಂಡೇಶನ್ ಮಂಗಳೂರು ಇದರ ಅಧ್ಯಕ್ಷ ನಾಸೀರ್ ಸಾಮಣಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಮೀದ್ ಪಜೀರ್, ಕೋಶಾಧಿಕಾರಿ ಇಲ್ಯಾಸ್ ಚಾರ್ಮಾಡಿ, ಕಾರ್ಯದರ್ಶಿ ಸೈಫುಲ್ಲಾ ಸೋಮೇಶ್ವರ, ಅಶ್ರಫ್ ಉಳ್ಳಾಲ, ಮಂಜನಾಡಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ಹಮೀದ್ ಮದ್ಪಾಡಿ, ಪುತ್ತುಬಾವ, ಪಂಚಾಯತ್ ಸದಸ್ಯರಾದ ಬಾವ ಮರಾಠಿಮೂಲೆ, ಸಿದ್ದೀಕ್ ಎಮ್ ಎಚ್, ಹಮೀದ್ ಎಮ್ ಎಚ್ ಕುಂಞಿ ಮತ್ತಿತರರು ಉಪಸ್ಥಿತರಿದ್ದರು.