ಮಂಗಳೂರಿನಲ್ಲಿ ಇಹ್ಸಾನೋತ್ಸವ: ಪ್ಲಾನಿಂಗ್ ಸಮಿತಿ ರಚನೆ
ಮಂಗಳೂರು, ಡಿ.18: ಇಹ್ಸಾನ್ ಕರ್ನಾಟಕವು 15 ವರ್ಷದ ಹಿಂದೆ ಆರಂಭಿಸಿದ ದಅ್‌ವಾ ಕಾರ್ಯಕ್ರಮದ ಅಂಗವಾಗಿ ನಗರದ ಅಡ್ಯಾರ್ ಕಣ್ಣೂರಿನಲ್ಲಿ 2026ರ ಎಪ್ರಿಲ್‌ನಲ್ಲಿ ಮೂರನೇ ಇಹ್ಸಾನೋತ್ಸವ ನಡೆಸಲು ನಿರ್ಧರಿಸಿದೆ. ಈ ಕಾರ್ಯಕ್ರಮದ ಯಶಸ್ವಿಗೆ ಬುಧವಾರ ನಗರದ ಎಸ್‌ವೈಎಸ್ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ಲಾನಿಂಗ್ ಸಮಿತಿಯನ್ನು ರಚಿಸಲಾಗಿದೆ.
ಇಹ್ಸಾನ್ ಅಧ್ಯಕ್ಷ ಹಫೀಳ್ ಸಅದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಕರ್ನಾಟಕ ಸುನ್ನಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು ಉದ್ಘಾಟಿಸಿ ಮಾತನಾಡಿದರು. ಸುನ್ನಿ ಸಂಘ ಕುಟುಂಬದ ನಾಯಕರಾದ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಡಾ ಎಮ್ಮೆಸ್ಸೆಂ ಝೈನಿ ಕಾಮಿಲ್ ಮಾತನಾಡಿದರು.
ಇಹ್ಸಾನ್ ಕರ್ನಾಟಕವು ಉತ್ತರ ಕರ್ನಾಟಕ ಭಾಗಕ್ಕೆ ದಾಇಗಳನ್ನು ಕಳುಹಿಸಿ ಧಾರ್ಮಿಕ ಬೋಧನೆಗಳನ್ನು ಆರಂಭಿಸಿತ್ತು. ಅದರ ಫಲವಾಗಿ ಇಂದು ಉತ್ತರ ಕರ್ನಾಟಕದಲ್ಲಿ ಹಲವು ಮಸೀದಿಗಳು ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸ ಕೇಂದ್ರಗಳು ವಿವಿಧ ಜಿಲ್ಲೆಗಳಲ್ಲಿ ತಲೆ ಎತ್ತಿ ನಿಂತಿವೆ. ಇಹ್ಸಾನ್‌ನ ವಿವಿಧ ಕ್ಯಾಂಪಸ್‌ಗಳಲ್ಲಿ ಸುಮಾರು 4 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ, 70ರಷ್ಟು ಅಧ್ಯಾಪಕ ವೃಂದವನ್ನು ಹೊಂದಿದೆ. ಅನಿವಾಸಿ ಸಂಘಟನೆ ಕೆಸಿಎಫ್ ಇದರ ಬೆನ್ನೆಲುಬಾಗಿದೆ. ಅಲ್ಲದೆ ಪ್ರೀ ಸ್ಕೂಲ್‌ನಂತಹ ವಿವಿಧ ಹೊಸ ಸಂಸ್ಥೆಗಳು ಬೆಳೆದು ಬರುತ್ತಿವೆ.
ಇಹ್ಸಾನಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ 4 ಸಾವಿರಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ಒಳಗೊಂಡ ತಂಡದಿಂದ ಎಪ್ರಿಲ್‌ನಲ್ಲಿ ಅಡ್ಯಾರ್ ಕಣ್ಣೂರಿನಲ್ಲಿ ಎರಡು ದಿನಗಳ ಇಹ್ಸಾನೋತ್ಸವದ ಪ್ಲಾನಿಂಗ್ ಸಮಿತಿಯ ಅಧ್ಯಕ್ಷರಾಗಿ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್, ಜನರಲ್ ಕನ್ವೀನರಾಗಿ ಅಶ್ರಫ್ ಕಿನಾರ ಮಂಗಳೂರು, ಸದಸ್ಯರಾಗಿ ಎಸ್‌ಪಿ ಹಂಝ ಸಖಾಫಿ ಬಂಟ್ವಾಳ, ಮೌಲಾನಾ ಎನ್‌ಕೆಎಂ ಶಾಫಿ ಸಅದಿ ಬೆಂಗಳೂರು, ಕೆಕೆಎಂ ಕಾಮಿಲ್ ಸಖಾಫಿ, ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಎಂವೈ ಹಫೀಳ್ ಸಅದಿ ಕೊಡಗು, ಹಸೈನಾರ್ ಆನೆಮಹಲ್, ಹಾಫಿಳ್ ಯಾಕುಬ್ ಸಅದಿ ನಾವೂರು, ನವಾಝ್ ಸಖಾಫಿ ಅಡ್ಯಾರ್ ಪದವು, ಖಲೀಲ್ ಮಾಲಿಕಿ, ಹಂಝ ಮೈಂದಾಲ, ಸಲೀಂ ಕನ್ಯಾಡಿ, ತೌಸೀಫ್ ಸಅದಿ ಹರೇಕಳ, ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ ಆಯ್ಕೆಯಾದರು.
ಸಭೆಯಲ್ಲಿ ಕೆಸಿಎಫ್ ನಾಯಕರಾದ ಅಬೂಬಕ್ಕರ್ ಹಾಜಿ ರೈಸ್ಕೊ, ಖಮರುದ್ದೀನ್ ಗೂಡಿನಬಳಿ, ಹಸೈನಾರ್ ಅಮಾನಿ ಅಜ್ಜಾವರ, ಅಬೂಸಾಲಿಹ್ ಸಖಾಫಿ, ಜೌಹರಿ ಖತರ್, ಇಕ್ಬಾಲ್ ಮಂಜನಾಡಿ ಉಪಸ್ಥಿತರಿದ್ದರು. ಇಹ್ಸಾನ್ ಡಿ.ಕೆ.ಅನ್ವರ್ ಅಸ್‌ಅದಿ ಕಾರ್ಯಕ್ರಮ ನಿರೂಪಿಸಿದರು.