×
Ad

ಮಿತ್ತೂರು ಕೆ.ಜಿ.ಎನ್. ದ‌ಅವಾ ಕಾಲೇಜು: 'ಫಿದಾಖ್ 5.0' ಸಮಾಪ್ತಿ

Update: 2023-12-21 22:30 IST

ಮಿತ್ತೂರು: ದಾರುಲ್ ಇರ್ಷಾದ್ ಮಾಣಿ ಇದರ ಅಧೀನ ಸಂಸ್ಥೆಯಾಗಿರುವ ಕೆ.ಜಿ.ಎನ್ ದಅವಾ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕ ಸಾಹಿತ್ಯಿಕ ಪ್ರತಿಭಾ ಕಾರ್ಯಕ್ರಮ 'ಫಿದಾಖ್ 5.0' ಇದರ ಸಮಾರೋಪ ಸಮಾರಂಭ ಬುಧವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ‌ಅವಾ ಕಾಲೇಜಿನ ಪ್ರಾಂಶುಪಾಲರಾದ ಸೈಯ್ಯಿದ್ ಸಲಾಹುದ್ದೀನ್ ಅದನಿ ತಂಙಳ್ ವಹಿಸಿದ್ದರು.

'ಗತಿಸದ ಗತವೈಭವ' ಎಂಬ ಧ್ಯೇಯ ವಾಕ್ಯದೊಂದಿಗೆ ಡಿ.18ರಂದು ಸಂಸ್ಥೆಯ ಸಾರಥಿ ಝೈನುಲ್ ಉಲಮಾ ಮಾಣಿ ಉಸ್ತಾದರಿಂದ ಚಾಲನೆ ಗೊಂಡು ಗುರುವಾರ ರಾತ್ರಿ ಸಮಾರೋಪಗೊಂಡಿತು. ಫಿದಾಕ್ 5.6 ಕಾರ್ಯಕ್ರಮದ ಸಂಭಾಂಗಣದ ಪ್ರವೇಶ ಕಾರ್ನರ್ ನಲ್ಲಿ ಅಳವಡಿಸಲಾಗಿದ್ದ ಐತಿಹಾಸಿಕ, ಸಾಂಸ್ಕೃತಿಕ ಘಟನೆಗಳು, ಇತಿಹಾಸ ತಿರುಚುವಿಕೆಗಳು ಹಾಗೂ ವರ್ತಮಾನ ಭಾರತದ ರಾಜಕೀಯ ಸ್ಥಿತ್ಯಂತರವನ್ನು ಬಿಂಬಿಸುವ ವರ್ಣಚಿತ್ರಗಳು ವೀಕ್ಷಕರನ್ನು ಆಕರ್ಷಿಸಿದವು. ಮುಖ್ಯಸಭಾಂಗಣ 'ಫಿರೋಝಾಬಾದ್ ಸ್ಕ್ವೇರ್ ನಲ್ಲಿ ಮೂರು ದಿನಗಳ ಕಾಲ ನಡೆದ ಸ್ಪರ್ಧಾ ಕಾರ್ಯಕ್ರಮಗಳ ಮಧ್ಯೆ ಏರ್ಪಡಿಸಲಾಗಿದ್ದ ವಿವಿಧ ವಿಶೇಷ ಕಾರ್ಯಾಗಾರಗಳಲ್ಲಿ ಎಚ್ ಐ ಅಬೂಸುಫ್ಯಾನ್ ಮದನಿ, ಹೋರಾಟಗಾರ, ಸಂಶೋದಕ ಪುರುಷೋತ್ತಮ ಬಿಳಿಮಲೆ ಮುಂತಾದವರು ಉಪನ್ಯಾಸ ನೀಡಿದರು.

ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಕಲಾ ಕಾರ್ಯಕ್ರಮಗಳು ನಿರ್ವಹಿಸುವ ಪಾತ್ರಗಳ ಕುರಿತು ಸಂಸ್ಥೆಯ ಸದರ್ ಮುದರ್ರಿಸ್ ಹುಸೈನ್ ಮುಈನಿ ಅಲ್-ಅಹ್ಸನಿ ಮಾರ್ನಾಡ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸುಫ್ಯಾನ್ ಸಖಾಫಿ, ಸಂಸ್ಥೆಯ ಮುದರ್ರಿಸ್ ಶರೀಫ್ ಸಖಾಫಿ ಮಾಣಿ, ಇರ್ಫಾನ್ ಅಬ್ದುಲ್ಲಾ ನೂರಾನಿ, ಅನ್ಸಾರ್ ಸ‌ಅದಿ ತಂಬಿನಮಕ್ಕಿ, ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯರಾದ ಅಶ್ರಫ್, ಅಬ್ದುರ್ರಝ್ಝಾಖ್ ಮುಸ್ಲಿಯಾರ್ ನೀರಕಟ್ಟೆ ದ‌ಅ್‌ವಾ ಕಾಲೇಜು ಮುದರ್ರಿಸ್ ಸಾಬಿತ್ ಮುಈನಿ ಅಸ್ಸಖಾಫಿ, ಮುನವ್ವಿರ್ ಅದನಿ, ಹನೀಫ್ ಅಝ್‌ಹರಿ, ಮಶ್ಹೂದ್ ಹಿಮಮಿ, ಲತೀಫ್ ಸ‌ಅದಿ ಅಲ್-ಅಫ್ಳಲಿ, ಮುಸ್ತಫಾ ಸಖಾಫಿ ಅಲ್ ಮುಈನಿ, ಶಾಹುಲ್ ಹಮೀದ್ ಮುಈನಿ ಅಲ್ ಅದನಿ, ಇಸ್ಮಾಈಲ್ ರಾಶಿದ್ ಮುಈನಿ, ಅಬ್ದುರ್ರಹ್ಮಾನ್ ಅನ್ವರಿ, ಹಾರಿಸ್ ಮುಈನಿ ಅಸ್ಸಖಾಫಿ, ಮುಂತಕಿಮ್ ಮು‌ಈನಿ, ಅಹ್ಮದ್ ಕಬೀರ್ ಸಖಾಫಿ ಮಾಲಾಡಿ, ಪಿಯು ವಿಭಾಗ ಪ್ರಾಂಶುಪಾಲರಾದ ಫಾರೂಕ್ ಸರ್, ರಿಝ್ವಾನ್ ಸರ್, ಇಫ್ತಿಕಾರ್ ಸರ್ ಹಾಗೂ ಕೆ.ಜಿ.ಎನ್ ಶೀ ಕ್ಯಾಂಪಸಿನ ಅಡ್ಮಿನಿಸ್ಟ್ರೇಟರ್ ಎ.ಕೆ ನಂದಾವರ, ಲತೀಫ್ ಮತ್ತಿತರು ಉಪಸ್ಥಿತರಿದ್ದರು.

ಮೂರು ತಂಡಗಳ ಮಧ್ಯೆ ನಡೆದ 96 ವಿವಿಧ ಸ್ಪರ್ಧೆಗಳಲ್ಲಿ 190 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಮುಝಮ್ಮಿಲ್ ನಾಯಕತ್ವದ ಟೀಂ ಅಲ್ ಅಶ್ರಫಿಯ್ಯಾ 'ಫಿದಾಖ್ 5.0' ಇದರ ಚಾಂಪಿಯನ್ ಆಗಿ ಹೊರಹೊಮ್ಮಿತು. ವಿದ್ಯಾರ್ಥಿ ನಾಯಕ ಅನ್ಸೀಫ್ ಮಂಚಿ ಕಾರ್ಯಕ್ರಮ ನಿರೂಪಿಸಿದರು. ಸಲಾಂ ಸಾಲೆತ್ತೂರು ವಂದಿಸಿದರು.








 





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News