×
Ad

49ನೇ ವರ್ಷದ ಪ್ರತಿಷ್ಠಿತ ತುಳುನಾಡ ಕುಮಾರ ಕುಸ್ತಿ ಪಂದ್ಯಾಟ: ನಶಾಲ್ ಅಹ್ಮದ್ ಚಾಂಪಿಯನ್

Update: 2025-12-21 21:45 IST

ಮಂಗಳೂರು: ದಕ್ಷಿಣ ಕನ್ನಡ ಅಮೆಚೂರ್ ಕುಸ್ತಿ ಸಂಘ ಮಂಗಳೂರು ಆಯೋಜಿಸಿದ 49ನೇ ವರ್ಷದ ಜಿಲ್ಲೆಯ ಪ್ರತಿಷ್ಠಿತ ತುಳುನಾಡ ಕುಮಾರ - ತುಳುನಾಡ ಕೇಸರಿ ಕುಸ್ತಿ ಪಂದ್ಯಾಟವು ಯೆನೆಪೋಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ ಇದರ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ನಡೆಯಿತು.


ಸುಮಾರು 15ಕ್ಕೂ ಹೆಚ್ಚು ವ್ಯಾಯಾಮ ಶಾಲೆಯ 300ಕ್ಕೂ ಅಧಿಕ ಕುಸ್ತಿ ಪಟುಗಳು ಭಾಗವಹಿಸಿದ್ದರು. ತುಳುನಾಡ ಕುಮಾರ 61 ಕೆಜಿ ವಿಭಾಗದಲ್ಲಿ ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ಇದರ ಕುಸ್ತಿಪಟು ನಶಾಲ್ ಅಹ್ಮದ್ ಅವರು ಚಾಂಪಿಯನ್‌ ಆಗಿದ್ದಾರೆ.


46 ಕೆಜಿ ವಿಭಾಗದಲ್ಲಿ ಫಾರ್ಹನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈ ಸಂದರ್ಭ ಬದ್ರಿಯಾ ಹೆಲ್ತ್ ಲೀಗ್ ಸುರತ್ಕಲ್ ಇದರ ಮಾಜಿ ಅಧ್ಯಕ್ಷರು ಹಾಗೂ ತರಬೇತುದಾರರಾದ ಝುಲ್ಫಿಕರ್ ಆಲಿ ಹಾಗೂ ಜಿಷಾನ್ ಆಲಿ ಮತ್ತು ಮಾಜಿ ರಾಜ್ಯ ಮಟ್ಟದ ಕುಸ್ತಿ ಪಟು ಸಾಹಿಲ್ ಸಹದ್ ಸುರತ್ಕಲ್ ಹಾಗು ಇತರರು ಉಪಸ್ಥಿತರಿದ್ದರು.









Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News