×
Ad

ಕೈರಂಗಳ| ಅಂಬರ್ ವ್ಯಾಲಿ ಶಾಲೆಯ ವಾರ್ಷಿಕೋತ್ಸವ

Update: 2025-12-21 19:22 IST

ಕೈರಂಗಳ : ಅಂಬರ್ ವ್ಯಾಲಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ, ಕೈರಂಗಳ ಇದರ ಶಾಲಾ ವಾರ್ಷಿಕೋತ್ಸವವನ್ನು ನಡೆಸಲಾಯಿತು.

ಸಂಸ್ಥೆಯ ಟ್ರಸ್ಟಿ ಪಿ. ಎ ಅಹ್ಮದ್ ಕುಂಜಿ ಹಾಜಿ ಕಾರ್ಯಕ್ರಮ ಉದ್ಘಾಟನೆಗೈದು, ಸಮಾರಂಭದ ಅಧ್ಯಕ್ಸತೆಯನ್ನು ಶಾಲಾ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ರವರು ವಹಿಸಿದರು. ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಇಫ್ತಿಕಾರ್ ಫರೀದ್ ರನ್ನು ಸನ್ಮಾನಿಸಲಾಯಿತು. ಅವರು ಶಿಕ್ಷಣದ ಮಹತ್ವ ಮತ್ತು ಲಭ್ಯವಿರುವ ಹಲವು ಪಾರಾ ಮೆಡಿಕಲ್ ಕೋರ್ಸುಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಕೊಟ್ಟು ಸನ್ಮಾನಿಸಲಾಯಿತು.

ಕಳೆದ ವರ್ಷದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ, ಪೋಷಕರಾದ ಅನಿವಾಸಿ ಭಾರತೀಯ ಉದ್ಯಮಿ ಮಜೀದ್ ಪಡಿಂಜಾರ್ ಹಾಗೂ ಸಂಸ್ಥೆಯ ಟ್ರಸ್ಟಿ ಸತ್ತಾರ್ ಖತರ್ ರವರಿಂದ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಖ್ಫ್ ಜಿಲ್ಲಾಧಿಕಾರಿ ಅಬೂಬಕ್ಕರ್, ಬ್ಯಾರಿಸ್ ಶಿಕ್ಷಣ ಸಂಸ್ಥೆಯ ಜಬ್ಬಾರ್ ಮೊಂಟೆಪದವು, ಪ್ರಥ್ವಿರಾಜ್, ಶಮಿಮ ಸುಲ್ತಾನ, ನಿಟ್ಟೆ ಕಾಲೇಜ್ ನ ಫಿರೋಝ್, ಬಾಳೆಪುಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶರೀಫ್ ಪಟ್ಟೋರಿ, ಸದಸ್ಯರಾದ ಜನಾರ್ಧನ್ ಕುಲಾಲ್, ಹನೀಫ್ ಎಚ್‌ ಕಲ್ಲು, PDO ವೆಂಕಟೇಶ್ ಉಪಸ್ಥಿತರಿದ್ದರು. ಮುಸ್ಲಿಂ ಶಿಕ್ಷಣ ಸಂಸ್ಥೆ ಗಳ ಒಕ್ಕೂಟ ಇದರ ಸಿವಿಲ್ ಸರ್ವಿಸ್ IAS/IPS ಬಗ್ಗೆ ಯುವ ಕೋಚ್ ಶಿಹಾಬುದ್ದೀನ್ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಸಂಸ್ಥೆಯ ಸಂಚಾಲಕರಾದ ಅಝೀಝ್ ಅಂಬರ್ ವ್ಯಾಲಿ ಸ್ವಾಗತಿಸಿದರು.‌ ಶಾಲಾ ಮುಖ್ಯ ಉಪಾಧ್ಯಾಯಿನಿ ಉಷಾ ವರದಿ ವಾಚಿಸಿದರು. ಸಮಾರಂಭದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಹೈದರ್ ಮಾವಿನಡಿ, ಶಾಲೆಯ ಗುಣ ಮಟ್ಟದ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶಭಾ, ಪವಿತ್ರ, ದಿವ್ಯ,  ಅಶ್ವಿನಿ ರಾವ್, ಖುಬುರಾ ನಿರ್ವಹಿಸಿದರು. ಕಾರ್ಯಕ್ರಮವನ್ನು ರಂಮ್ಲ ಸಂಯೋಜಿಸಿದರು. ಅಶ್ವಿನಿ ನಾಯ್ಕ್ ವಂದಿಸಿದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News