×
Ad

ಜಪಾನ್ ನಲ್ಲಿ ನಡೆಯುವ ಸುಕುರಾ ವಿಜ್ಞಾನ ಮೇಳಕ್ಕೆ ಅಬ್ದುಲ್ ಬಾಶಿತ್ ಆಯ್ಕೆ

Update: 2025-06-11 18:58 IST

ಉಪ್ಪಿನಂಗಡಿ : ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ನಡೆಸಿದ ಇನ್ ಸ್ಪಾಯರ್ ಅವಾರ್ಡ್ ಮಾನಕ್ ಸ್ಪರ್ಧೆಯಲ್ಲಿ ಅಬ್ದುಲ್ ಬಾಷಿತ್ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ದಿಲ್ಲಿಯ IIT (ಐಐಟಿ)ಕ್ಯಾಂಪಸ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ತನ್ನ ಮಾದರಿಯನ್ನು ವಿದ್ಯಾರ್ಥಿ ಪ್ರದರ್ಶಿಸಿದ್ದು, ಇದೀಗ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಜಪಾನ್‌ನಲ್ಲಿ ನಡೆಯುವ "ಸುಕುರಾ"ಎಂಬ ವಿಜ್ಞಾನ ಮೇಳದಲ್ಲಿ ಭಾಗವಹಿಸುವ ಸುವರ್ಣಾವಕಾಶವನ್ನು ಪಡೆದಿದ್ದಾರೆ.

ಇವರು ಪ್ರದರ್ಶಿಸಿದ ಮಾದರಿಯು ವಿಶೇಷ ಅಗತ್ಯವುಳ್ಳ ಮುಖ್ಯವಾಗಿ ಕೈಗಳನ್ನು ಕಳೆದುಕೊಂಡಿರುವ ವ್ಯಕ್ತಿಗಳಿಗೆ ಅನುಕೂಲವಾಗುವ ಮಾದರಿಯಾಗಿದೆ

ಇವರು ಕಡವಿನ ಬಾಗಿಲು ನಿವಾಸಿ ಇಲಿಯಾಸ್ ಪಾಷ ಅವರ ಮಗ. ಮಾಲಿಕ್ ದಿನಾರ್ ಜುಮಾ ಮಸೀದಿಯ ತನ್ವೀರುಲ್ ಇಸ್ಲಾಂ ಮದ್ರಸದ 10ನೇ ತರಗತಿ ವಿದ್ಯಾರ್ಥಿ ,ಹಾಗೂ SKSBV ತನ್ವೀರುಲ್ ಇಸ್ಲಾಂ ಮದ್ರಸದ ಪ್ರದಾನ ಕಾರ್ಯದರ್ಶಿಯೂ ಆಗಿದ್ದಾರೆ.

ಇವರಿಗೆ SKSBV ತನ್ವೀರುಲ್ ಇಸ್ಲಾಂ ಮದ್ರಸ ಉಪ್ಪಿನಂಗಡಿ ವತಿಯಿಂದ ಸನ್ಮಾನಿಸಲಾಯಿತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News